Breaking News

ಬಾಲಕಿಯೊಬ್ಬಳ ಮೇಲೆ ಮಿನಿ ಲಾರಿ ಸ್ಥಳದಲ್ಲೇ ಸಾವು

ಧಾರವಾಡ : ಬಾಲಕಿಯೊಬ್ಬಳ ಮೇಲೆ ಮಿನಿ ಲಾರಿ ಹರಿದು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ . ಮೈಮೇಲೆ ಮಿನಿ ಲಾರಿ ಹರಿದು ಬಾಲಕಿ ಸಾವಿಗೀಡಾಗಿ ದ್ದಾಳೆ.ನಗರದ ಕಲ್ಯಾಣನಗರ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು ಅನಂ ರಿಜ್ವಾನ್ ಐನಾಪೂರ ( ೩ ) ಮೃತಳಾದ ಬಾಲಕಿಯಾಗಿದ್ದಾಳೆ.

ಧಾರವಾಡ ಟೈವಾಕ್ ಕಾಲೋನಿ ನಿವಾಸಿಯಾಗಿದ್ದು ಪೋಷಕರ ಜೊತೆ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು ಬಾಲಕಿ ಈ ವೇಳೆ ಬಾಲಕಿ ಮೇಲೆ ಹಾದು ಹೋಗಿದೆ ಮಿನಿ ಲಾರಿ.ಸೆಪ್ಟಿಕ್ ಟ್ಯಾಂಕ್ ಹೊತ್ತು ಹೋಗುವ ಮಿನಿ ಲಾರಿ.

ಈ ವೇಳೆ ಆಕ್ರೋಶಿತ ಪೋಷಕರಿಂದ ಮಿನಿ ಲಾರಿ ಗಾಜು ಒಡೆದು ಆಕ್ರೋಶವನ್ನು ವ್ಯಕ್ತಪಡಿಸಿದರು.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಈ ಕುರಿತು ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *