Breaking News

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ

ಬೆಂಗಳೂರು ಗ್ರಾಮಾಂತರ: ನೆಲಮಂಗಲದ ಬಾವಿಕೆರೆಯಲ್ಲಿ JDSನ ಜನತಾ ಜಲಧಾರೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿ ಉತ್ತರ ಕೊಟ್ಟಿದ್ದೀರಿ. ಮೈಸೂರಿನಲ್ಲಿ ಜೆಡಿಎಸ್‌ ಒಂದೇ ಒಂದು ಸೀಟ್‌ ಗೆಲ್ಲಲ್ಲ ಎಂದಿದ್ದರು. ಜೆಡಿಎಸ್‌ನಿಂದಲೇ ಬೆಳೆದಿದ್ದ ಸಿದ್ದರಾಮಯ್ಯ ಪಕ್ಷದ ಬಗ್ಗೆ ಹೇಳಿದ್ರು. ಹೀಗೆ ಹೇಳಿದ್ದ ಸಿದ್ದರಾಮಯ್ಯರನ್ನ ಸೋಲಿಸಿ ಉತ್ತರ ಕೊಟ್ಟಿದ್ದೀರಿ ಎಂದರು.

ಜೆಡಿಎಸ್​ಗೆ ಭವಿಷ್ಯವೇ ಇಲ್ಲ ಅಂತಾ ಹೇಳುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಾನು ಹೊರಗೆ ಬಂದಿರಲಿಲ್ಲ. ಆಗ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್​ಗೆ ಇದ್ದಂತಹ ಆತುರ ನನಗೆ ಇರಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಂದೂ ಸ್ಥಾನ ಬರೋದಿಲ್ಲ ಅಂದ್ರು. ಇಲ್ಲಿಂದಲೇ ಬೆಳೆದು ಹೋದವರು ಹೇಳಿದ್ದರು. ಇಲ್ಲಿಂದಲೇ ಅವರಿಗೆ ತಕ್ಕ ಉತ್ತರ ಕೊಟ್ಟಿದ್ದೀರಿ. ಬೆಳಗ್ಗೆ ಎದ್ರೆ ನನ್ನ ಮನೆಗೆ ಪ್ರತಿದಿನ 20 ಜನ ಬರುತ್ತಾರೆ. ಶಾಲೆಗೆ ಶುಲ್ಕ, ಆಸ್ಪತ್ರೆಗೆ ಹಣ ಕಟ್ಟಲು ಶಕ್ತಿ ಇಲ್ಲದ ಕಾರಣ ಕಷ್ಟವನ್ನ ಹೊತ್ತು ನಮ್ಮ ಬಳಿ ಬರುತ್ತಾರೆ. ನಾನು ಈಗಾಗಲೇ ಎರಡು ಭಾರಿ ಸಿಎಂ ಆಗಿದ್ದೇನೆ. ರಾಜಕೀಯದ ಕೆಲ ಬೆಳವಣಿಗೆಯಿಂದ ಎರಡು ಭಾರಿ ಸಿಎಂ ಆದೆ. ಆದರೆ, ಸ್ವತಂತ್ರವಾದ‌ ಸರ್ಕಾರ ಇರಲಿಲ್ಲ. ಅನುಕಂಪ ಗಿಟ್ಟಿಸಿ ಅಧಿಕಾರ ಪಡೆಯಬೇಕೆಂಬ ಉದ್ದೇಶ ಇಲ್ಲ. ಪಂಚರತ್ನ ಕಾರ್ಯಕ್ರಮದ ಬಗ್ಗೆ ಹುಡುಗಾಟಿಕೆಯಿಂದ ಹೇಳುತ್ತಿಲ್ಲ. ನಾಡಿನ ಪರ ಹೋರಾಟ ಮಾಡುವ ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ. ಫೀನಿಕ್ಸ್‌ ನಂತೆ ಎದ್ದು ಬರುತ್ತೇನೆ. 2023 ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ ಎಂದರು.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *