ಕಲಘಟಗಿ:ಪಟ್ಟಣದ ಗ್ರಾಮಸಭೆಗೆ ಬಹಳಷ್ಟು ಅಧಿಕಾರಿಗಳು ಗೈರು ಇರುದ ಕಾರಣ ಗ್ರಾಮಸ್ಥರು ಆಕ್ರೋಶಗೊಂಡು ಗ್ರಾಮ ಸಭೆಯನ್ನು ರದ್ದು ಗೊಳಿಸಿದ್ದಾರೆ.
ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು.ಗ್ರಾಮ ಪಂಚಾಯತ್‌ನಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಬಹಳಷ್ಟು ಹಣ ದುರ್ಬಳಕೆ ಮಾಡಲಾಗಿದ್ದು ಅವುಗಳ ಮಾಹಿತಿ ನೀಡದೆ ಇರುವುದಕ್ಕೆ ಜನರು ಆಕ್ರೋಶಗೊಂಡು ಆಧಿಕಾರಿಗಳನ್ನು ತಾರಾಟೆಗೆ ತೆಗೆದುಕೊಂಡರು.
ನಂತರ ಅಧಿಕಾರಿಗಳು ಗ್ರಾಮ ಸಭೆ ದಿನಾಂಕವನ್ನು ಹದಿನೈದು ದಿನಗಳ ಒಳಗಾಗಿ ತಿಳಿಸಲಾಗುವುದು ಗೈರು ಹಾಜರ್ ಇರುವ ಅಧಿಕಾರಿಗಳಿಗೆ ನೋಟಿಸ್ ನೀಡುವ ಮುಲಕ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರ್ ಇರುವಂತೆ ತಿಳಿಸಲಾಗುವುದು ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

