Breaking News

ಹುಬ್ಬಳ್ಳಿ ಗಲಭೆ : 7 ಜನರಿಗೆ ಜಾಮೀನು


ಹುಬ್ಬಳ್ಳಿ : ನಗರದ ಶಾಂತಿಯನ್ನು ಹಾಳು ಮಾಡಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದವರಲ್ಲಿ ಏಳು ಜನರಿಗೆ ಜಾಮೀನು ದೊರೆತಿದೆ , ತಿಂಗಳ ಹಿಂದೆಯಷ್ಟೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾದ 156 ಆರೋಪಿಗಳಲ್ಲಿ ಏಳು ಮಂದಿಗೆ ಜಾಮೀನು ದೊರೆತಿದ್ದು , ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿದ್ಯಾರ್ಥಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಜಾಮೀನಿಗೆ 148 ಮಂದಿಯಿಂದ ಅರ್ಜಿ ಸಲ್ಲಿಸಲ್ಲಿಸಲಾಗಿತ್ತುಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪಿಯುಸಿ , ಪದವಿ ಶೈಕ್ಷಣಿಕ ಹಿನ್ನೆಲೆಯಲ್ಲಿ ಆರು ಮಂದಿಗೆ ಹಾಗೂ ವೈದ್ಯಕೀಯ ಶಿಕ್ಷಣದ ಹಿನ್ನೆಲೆಯಲ್ಲಿ ಒಬ್ಬರಿಗೆ ಜಾಮೀನು ನೀಡಿದೆ ಎಂದು ಆರೋಪಿ ಪರ ವಾದ ಮಂಡಿಸಿದ್ದ ವಕೀಲ ಬಿ.ಆರ್.ಮಹ್ಮದನವರ್ ತಿಳಿಸಿದರು ಜಾಮೀನು ಮೇಲೆ ಬಿಡುಗಡೆಯಾದವರು ಬಳ್ಳಾರಿ , ಮೈಸೂರು , ಕಲಬುರ್ಗಿ ಮತ್ತು ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದರು .

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *