Breaking News

ನಾಟಕಗಳು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುತ್ತಿವೆ

ಧಾರವಾಡ: ರಂಗಭೂಮಿಯು ಸಮಾಜದಲ್ಲಿ ನಡೆಯುತ್ತಿರುವ ಘಟನೆ, ಸಮಸ್ಯೆಗಳು, ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ನಾಟಕಗಳ ಮೂಲಕ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಅವರು ಹೇಳಿದರು.

ಧಾರವಾಡ ರಂಗಾಯಣವು ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಭಾರತೀಯ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಕಾರ್ಯವನ್ನು ನಾಟಕಗಳು ಮಾಡುತ್ತಿವೆ. ನಾಟಕಗಳ ಮೂಲಕ ಜನರಲ್ಲಿ ಸಮಾಜದ ಕುರಿತು ತಿಳುವಳಿಕೆಯನ್ನು ನೀಡಲಾಗುತ್ತಿದೆ. ಇದೇ ರೀತಿ ಧಾರವಾಡ ರಂಗಾಯಣವು ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಹೇಳಿದರು.

ಸಾಹಿತಿಗಳಾದ ಮಾರ್ತಾಂಡಪ್ಪ ಕತ್ತಿ ಅವರು ಮಾತನಾಡಿ, ಧಾರವಾಡ ರಂಗಾಯಣವು ವೃತ್ತಿ ಹಾಗೂ ಹವ್ಯಾಸಿ ಕಲಾವಿದರಿಗೆ ರಂಗಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಉತ್ತಮ ಅವಕಾಶಗಳನ್ನು ನೀಡುತ್ತಿದೆ. ಕಲಾವಿದರು ಒಗ್ಗಟ್ಟನ್ನು ರೂಢಿಸಿಕೊಳ್ಳುವ ಮೂಲಕ ರಂಗಭೂಮಿಯನ್ನು ಬೆಳೆಸಬೇಕು. ಧಾರವಾಡ ರಂಗಾಯಣವು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವ ಮೂಲಕ ಮಕ್ಕಳಲ್ಲಿ ರಂಗಕಲೆಯನ್ನು ಅಳವಡಿಸಿಕೊಳ್ಳಲು ಪ್ರೇರಣೆಯನ್ನು ನೀಡಿದೆ. ಎಲ್ಲ ರಂಗಾಸಕ್ತರು ಸಹಕಾರ ಮತ್ತು ಪ್ರೋತ್ಸಾಹ ನೀಡುವ ಮೂಲಕ ರಂಗಭೂಮಿ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.

ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ ಮುತ್ತಣ್ಣವರ ಅವರು ಉಪಸ್ಥಿತರಿದ್ದರು. ಕಲಾವಿದೆ ಇಂದು ಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಅಕ್ಷತಾ ಪಾಂಡವಪುರ ಆಪ್ತ ರಂಗಪ್ರಸ್ತುತಿಯ ಲೀಕ್ ಔಟ್ (ಕಥನ ಪ್ರದರ್ಶನ)ವನ್ನು ಪಾಂಡವಪುರ ದಿ ಚಾನೆಲ್ ಥಿಯೇಟರ್ ಕಲಾವಿದರು ಪ್ರದರ್ಶಿಸಿದರು. ಡಾ.ಶಶಿಧರ ನರೇಂದ್ರ, ಬಿ.ಐ ಈಳಗೇರ, ಲಕ್ಷ್ಮಣ ಬಕ್ಕಾಯಿ, ಇಂಜಿನಿಯರ ಸುನೀಲ ಬಾಗೇವಾಡಿ, ಸಂಜಯ ಕಬ್ಬೂರ, ಜ್ಯೋತಿ ಪುರಾಣಿಕ, ರಾಜಕುಮಾರ ಮಡಿವಾಳರ, ಈರಣ್ಣ ಐನಾಪೂರ, ರಂಗಾಯಣದ ಕಲಾವಿದರು ಮತ್ತು ರಂಗಾಸಕ್ತರು ಇದ್ದರು

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *