ಧಾರವಾಡ: ಕರ್ನಾಟಕ ಪಶ್ಚಿಮ ಶಿಕ್ಷಕರ ಚುನಾವಣೆ -2022 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗಿರುವ ಶಿಕ್ಷಕರ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಿಮಿತ್ಯಜೂನ್ 13 ರಂದು ಮತದಾನ ಜರುಗಲಿದೆ .
ಸದರಿ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಹಿತದೃಷ್ಠಿಯಿಂದ ಮತದಾನದ ಪೂರ್ವದಿನ ಜೂನ್ 12 ಮತ್ತು ಮತದಾನ ದಿನವಾದ ಜೂನ್ 13 ರಂದು ಮತದಾನ ನಡೆಯುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಸಂತೆ , ಜಾತ್ರೆ , ಉತ್ಸವಗಳನ್ನು ನಿಷೇಧಿಸಿ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಇಂದು ಆದೇಶಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

