ಅಮರಾವತಿ:ನಾಯಿಗಳಿಗೆ ಇರುವ ನಿಯತ್ತು, ಸ್ವಾಮಿನಿಷ್ಠೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ತನ್ನ ಪ್ರೀತಿಯ ಮಾಲಕಿ ಜೊತೆ ಒಡನಾಟ ಹೊಂದಿದ್ದ ನಾಯಿ, ಆಕೆ ಸತ್ತಿರುವುದು ತಿಳಿಯದೇ ಅವಳ ಬರುವಿಕೆಗೆ ಚಪ್ಪಲಿ ಬಳಿಯೇ ರಾತ್ರಿಯೆಲ್ಲಾ ಕಾದು ಕುಳಿತ ಮನಕಲಕುವ ಘಟನೆ ನಡೆದಿದೆ.
ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ಕಳೆದ ಭಾನುವಾರ 22 ವರ್ಷದ ಯುವತಿ ತನ್ನ ಮುದ್ದು ನಾಯಿ ಜೊತೆ ವಾಕಿಂಗ್ ಹೋಗಿದ್ದಳು. ಸೂರ್ಯಾಸ್ತದ ಸೊಬಗು ಆನಂದಿಸುತ್ತಿದ್ದ ನೂರಾರು ಜನರ ಎದುರು ಯುವತಿ ಜಿಎಂಸಿ ಬಾಲಯೋಗಿ ಸೇತುವೆಯಿಂದ ಆಕೆ ನದಿಗೆ ಹಾರಿದ್ದಾಳೆ. ತಕ್ಷಣಕ್ಕೆ ಅಲ್ಲಿದ್ದ ಜನರು ಬೋಟ್ ರೈಡರ್ಗೆ ಎಚ್ಚರಿಸಿದ್ದಾರೆ. ಆದರೆ, ನೀರಿನ ರಭಸದ ಹಿನ್ನೆಲೆ ಯುವತಿ ಕೊಚ್ಚಿ ಹೋಗಿದ್ದು, ಆಕೆಯ ಹುಡುಕಾಟ ವಿಫಲವಾಗಿದೆ.ಈ ವೇಳೆ ಜೊತೆಯಲ್ಲಿ ನಡೆದು ಬರುತ್ತಿದ್ದ ಮಾಲಕಿ ತಕ್ಷಣಕ್ಕೆ ನದಿಗೆ ಹಾರಿದ ಹಿನ್ನೆಲೆ ನಾಯಿ ಕೂಡ ವಿಚಲಿತಗೊಂಡು ಚಡಪಡಿಸಿದೆ. ಮಾಲಕಿಗಾಗಿ ಸೇತುವೆ ಮೇಲೆ ದಿಕ್ಕು ತೋಚದಂತೆ ನದಿ ಕಡೆ ನೋಡಿದೆ. ಕಡೆಗೆ ಏನು ಮಾಡುವುದು ಎಂದು ತಿಳಿಯದ ನಾಯಿ, ಮಾಲಕಿ ಬರುತ್ತಾಳೆ ಎಂದು ನಿರೀಕ್ಷಿಸುತ್ತ, ಆಕೆಯ ದಾರಿಗಾಗಿ ಕಾದು ಕುಳಿತಿದೆ. ಕಡೆಗೆ ಆಕೆ ತನ್ನ ಚಪ್ಪಲಿ ತೋಡಲು ಬಂದೇ ಬರುತ್ತಾಳೆ ಎಂದು ಆಕೆ ಚಪ್ಪಲಿ ಬಿಟ್ಟ ಸ್ಥಳದಲ್ಲೇ ಅಲುಗಾಡದೇ ಕಾದು ಕುಳಿತಿದೆ. ಭಾನುವಾರ ರಾತ್ರಿಯೆಲ್ಲಾ ಆಕೆಯ ಚಪ್ಪಲಿ ಬಳಿಯೇ ಕುಳಿತು ನಿದ್ದೆಗೆ ಜಾರಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





