ಮಧುರೈ: ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಯುವಕನೊಬ್ಬ ಕುಸಿದುಬಿದ್ದಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುವಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ.
ಈ ಘಟನೆ ತಮಿಳುನಾಡಿನ ಮಧುರೈ ಪಾಲಂಗಂಟಂ ನಲ್ಲಿ ನಡೆದಿದೆ. 27 ವರ್ಷದ ಶ್ರೀ ವಿಷ್ಣು ಮೃತ ಯುವಕ. ಜೂನ್4ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಶ್ರೀವಿಷ್ಣು ರಾತ್ರಿ 8.30 ರ ವರೆಗೆ ಕೆಲಸ ಮಾಡಿ 9 ಗಂಟೆ ಸುಮಾರಿಗೆ ಜಿಮ್ ಗೆ ತೆರಳಿದ್ದನು ಎನ್ನಲಾಗಿದೆ. ವರ್ಕೌಟ್ ಮಾಡಿದ ಸ್ವಲ್ಪ ಸಮಯದ ಬಳಿಕ ಆತ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

