Breaking News

ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ


ಬಾಗಲಕೋಟೆ: ನನಗೆ ಪ್ರಚಾರದ ಅವಶ್ಯಕತೆ ಇಲ್ಲ, ಸುದ್ದಿ ಬೇಕೆಂದರೆ ನೀವು ಕಾಯಲೇಬೇಕು ಎಂದು ಮಾಧ್ಯಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಘುವಾಗಿ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರಿಗೆ ಅಷ್ಟು ಇಂಪಾರ್ಟೆನ್ಸ್​ ಕೊಡಬಾರದು, ನನಗೆ ಪ್ರಚಾರ ಬೇಕಿಲ್ಲ, ಅವಶ್ಯಕತೆಯೂ ಇಲ್ಲ, ಎಂದು ಹೇಳಿದ್ದಾರೆ.ಟಿಆರ್​ಪಿ ಬೇಕಾಗಿರುವುದು ಮಾಧ್ಯಮದವರಿಗೆ ನಮಗಲ್ಲ, ಇವರಿಗೆ ಮಹತ್ವ ಕೊಡಲೇಬಾರದು, ಸುದ್ದಿ ಕೊಡೋರು ನಾವು, ಬೇಕಾಗಿರೋದು ನಿಮಗೆ ಹಾಗಾಗಿ ನೀವು ಕಾಯಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಳಗ್ಗೆಯಿಂದ ಮಾಧ್ಯಮಗಳ ಜತೆಗೆ ಮಾತನಾಡಲು ನಿರಾಕರಿಸಿದ ಅವರು, ಮಧ್ಯಾಹ್ನ ಮಾಧ್ಯಮದವರು ಕಾಣುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *