ಧಾರವಾಡ : ತಮ್ಮ ಇಲಾಖೆ ಯೋಜನೆಗಳ ಮತ್ತು ಇಲಾಖೆಗೆ ಸಂಬಂದಿತ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ, ಮಾಧ್ಯಮ ಪ್ರತಿನಿಧಿಗಳಿಂದ ಕರೆ ಬಂದಾಗ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ತಮಗೆ ಕಾರ್ಯ ಒತ್ತಡವಿದ್ದಲ್ಲಿ ತಮ್ಮ ಅಧೀನ ಅಧಿಕಾರಿಗಳಿಂದ ಮಾಹಿತಿ ನೀಡಲು ಕ್ರಮವಹಿಸಬೇಕು. ಸಾರ್ವಜನಿಕ ಹಿತಾಸಕ್ತಿ ಸಂಬಂದಿಸಿದಂತೆ ಪ್ರಕಟಣೆ, ಸುದ್ದಿಗಳಿದ್ದಲ್ಲಿ ವಾರ್ತಾ ಇಲಾಖೆ ಮೂಲಕ ನೀಡಬಹುದು. ಅಧಿಕಾರಿಗಳು ಸಾರ್ವಜನಿಕರ ಕರೆಗಳನ್ನು ತಕ್ಷಣಕ್ಕೆ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಜಿಲ್ಲಾಡಳಿತಕ್ಕೆ ಬರುತ್ತಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹರಿಸಬೇಕೆಂದು ಈ ಮೂಲಕ ನಿರ್ದೇಶಿಸಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





