Breaking News

ಕೇಂದ್ರ ಸಚಿವರೊಂದಿಗೆ ಅನುಚಿತವಾಗಿ ವರ್ತನೆ : ಶಾಲಾ ಶಿಕ್ಷಕ ಅಮಾನತು



ಬೀದರ್ : ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಜತೆ ಮೊಬೈಲ್‌ ನಲ್ಲಿ ಅನುಚಿತವಾಗಿ ವರ್ತಿಸಿದ ಆರೋಪ ಹಿನ್ನಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತ್ತುಗೊಳಿಸಿ ಡಿಡಿಪಿಐ ಗಣಪತಿ ಬಾರಾಟಕೆ ಆದೇಶ ಹೊರಡಿಸಿದ್ದಾರೆ.

ಔರಾದ ತಾಲೂಕಿನ ಜೀರ್ಗಾ(ಕೆ) ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ ಅಮಾನತ್ತುಗೊಂಡ ಶಿಕ್ಷಕರ. ಜೂ. 10 ರಂದು ಪಾಟೀಲ ಅವರು ಸ್ವಗ್ರಾಮ ಹೆಡಗಾಪುರದಲ್ಲಿ ರಸಗೊಬ್ಬರ ಕೊರತೆ ಸಂಬಂಧ ಕೇಂದ್ರ ಸಚಿವ ಖೂಬಾ ಅವರಿಗೆ ಮೊಬೈಲ್ ಕರೆ ಮಾಡಿದ್ದರು. ಈ ವೇಳೆ ಸಚಿವರು ಮತ್ತು ಶಿಕ್ಷಕನ ನಡುವೆ ನಡೆದ ಏಕ ವಚನದಲ್ಲಿ ಮಾತಿನ ವಾಗ್ವಾದದ‌ ಆಡಿಯೋ ವೈರಲ್ ಆಗಿತ್ತು.ಘಟನೆಗೆ ಸಂಬಂಧ ಔರಾದ ಬಿಇಒ ಎಚ್.‌ಎಸ್. ನಗನೂರು ಅವರು ನೀಡಿರುವ ವರದಿ ಅನ್ವಯ ಶಿಕ್ಷಕ ಕುಶಾಲ ಅವರನ್ನು ಅಮಾನತು ಗೊಳಿಸಲಾಗಿದೆ. ಕೇಂದ್ರ ಸಚಿವರೊಂದಿಗೆ ಶಿಕ್ಷಕ ಪಾಟೀಲ, ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಹಾಗೂ ಸಚಿವರೊಂದಿಗೆ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಕ್ಕೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ‌ ಎಂದು ಡಿಡಿಪಿಐ  ತಿಳಿಸಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *