ರಾಮನಗರ: ಖಾತೆ ಮಾಡಿಕೊಡುವದಾಗಿ ಹೇಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭಾ ಆಯುಕ್ತ ಹಾಗೂ ಕೇಸ್ ವರ್ಕರ್ ಎಸಿಬಿ ಅಧಿಕಾರಿಗಳ ತೆಕ್ಕೆಗೆ ಬಿದ್ದಿದ್ದಾರೆ.ನಗರಸಭಾ ಆಯುಕ್ತ ಪುಟ್ಟಸ್ವಾಮಿ ಹಾಗೂ ಕೇಸ್ ವರ್ಕರ್ ಮೋಹನ್ ಎಸಿಬಿ ಬಲೆಗೆ ಬಿದ್ದಿರುವ ಆರೋಪಿಗಳು.ನಗರಸಭಾ ಆಯುಕ್ತ ಪುಟ್ಟಸ್ವಾಮಿ ಸಿದ್ದಿಖ್ ಎಂಬುವವರ ಬಳಿ ಖಾತೆಗಾಗಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರಸಭೆ ಮೇಲೆ ಏಕಾಏಕಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿಸಿದ್ದಿಖ್ ಅವರಿಂದ 15ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





