Breaking News

ಕನ್ಹಯ್ಯಲಾಲ್ ಕೊಲೆ ಪ್ರಕರಣ : ಇಬ್ಬರು ಬಂಧನ


ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಶಿರಚ್ಛೇದ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇಡೀ ಅಪರಾಧದ ಹಿಂದಿನ ಸಂಚು ರೂಪಿಸುವಲ್ಲಿ ಹಾಗೂ ಸಿದ್ಧತೆಯಲ್ಲಿ ಭಾಗಿಯಾಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್​ ಮಾಹಿತಿ ನೀಡಿದ್ದಾರೆ.

ಟೈಲರ್​​ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯಲಾಲ್​​ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿದ್ದರು. ಇದರಿಂದ ಕೆರಳಿದ ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯಲಾಲ್​ ಅಂಗಡಿಗೆ ತೆರಳಿ ಅವರ ಶಿರಚ್ಛೇದ ಮಾಡಿದ್ದರು.‌ ಇದಾದ ಕೊಲೆಯ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ಶಿರಚ್ಛೇದದ ಹೊಣೆಯನ್ನು ಹೊತ್ತಿದ್ದ ರಿಯಾಜ್​ ಅಖ್ತರಿ ಹಾಗೂ ಘೌಸ್​ ಮೊಹಮ್ಮದ್​​ ಪ್ರಧಾನಿ ಮೋದಿ ಹಾಗೂ ನೂಪುರ್​ ಶರ್ಮಾರಿಗೂ ಬೆದರಿಕೆಯನ್ನು ನೀಡಿದ್ದರು. ಘಟನೆ ನಡೆದ ಮಾರನೇ ದಿನವೇ ರಾಜಸ್ಥಾನ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *