ಮೈಸೂರು : ಸೇವಾ ನಿವೃತ್ತಿ ದಿನವೇ ಮೈಸೂರು ವಿಶ್ವವಿದ್ಯಾಲಯದನೌಜರನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರಂ ನ ಬೂತಾಳೆ ಮೈದಾನದಲ್ಲಿ ನಡೆದಿದೆ.
ವಿವಿಯ ಇಂಜಿನಿಯರಿಂಗ್ ವಿಭಾಗದ ಕೃಷ್ಣೇಗೌಡ (60) ಮೃತ ದುರ್ದೈವಿ. ಗುರುವಾರ ಬೆಳಗ್ಗೆ 5 ಗಂಟೆಯ ಸಮಯದಲ್ಲಿ ವಿದ್ಯಾರಣ್ಯಪುರಂ ಬಳಿ ಇರುವ ಬೂತಾಳೆ ಮೈದಾನದಲ್ಲಿ ವಾಯುವಿಹಾರಕ್ಕೆ ತೆರಳಿದ್ದಾರೆ.ರಕ್ತದ ಮಡುವಿನಲ್ಲಿದ್ದ ಕೃಷ್ಣಗೌಡರನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ವಿದ್ಯಾರಣ್ಯಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





