ತುಮಕೂರು: ದೇವೇಗೌಡ್ರು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎನ್ನುವ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜಣ್ಣಗೆ ಏಕವಚನದಲ್ಲೇ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಅವರ ಸಂಸ್ಕೃತಿ ತೋರುತ್ತದೆ. ಅವತ್ತು ಅವರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ದೇವೇಗೌಡರು ಪ್ರಚಾರಕ್ಕೆ ಬರಲೇಬೇಕು ಅಂತಾ ಹಠ ಹಿಡಿದಿದ್ರು. ಅವತ್ತು ದೇವೇಗೌಡರು, ಪ್ರಚಾರಕ್ಕೆ ಹೋಗಿದ್ದಕ್ಕೆ ಅವರು ಗೆದ್ದಿದ್ದು. ಇವತ್ತು ದೇವೇಗೌಡರ ಬಗ್ಗೆ ಈ ರೀತಿಯ ಮಾತಾಡ್ತೀರಾ ಎಂದು ರಾಜಣ್ಣ ವಿರುದ್ಧ ಕಿಡಿಕಾರಿದರು.
ತುಮಕೂರಿನಲ್ಲಿ ದೇವೇಗೌಡರು ಅಷ್ಟು ಜ್ವರ ಇದ್ದಾಗ ಬಂದು ನಿನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಆದರೆ ದೇವೇಗೌಡರು ತುಮಕೂರಿನಲ್ಲಿ ಸೋಲಲು ನೀನೂ ಕಾರಣನಾದ್ಯಲ್ಲಪ್ಪಾ. ದೇವೇಗೌಡರ ಆರೋಗ್ಯದಲ್ಲಿ ಆದ ಏರುಪೇರಿಗೆ ನಿಮ್ಮಂತಹಾ ಕೃತಘ್ನರು ಕಾರಣ. ಇನ್ನೂ ಎರಡು ತಿಂಗಳು ಕಾದು ನೋಡು. ಯಾರ ಸಹಾಯವಿಲ್ಲದೇ ನಡೆಯುತ್ತಾರೆ. ನೀನು ಕ್ಷಮೆ ಕೇಳು ಅಂತಾ ನಾನು ಹೇಳಲ್ಲ. ಹುಷಾರ್ ಅಂತಾ ಹೇಳಲು ಬಯಸ್ತೀನಿ. ಮಧುಗಿರಿಯಲ್ಲಿ ಬಂದು ಕಾರ್ಯಕರ್ತರಿಂದ ಉತ್ತರ ಕೊಡಿಸುತ್ತೇನೆ. ಪ್ರಾಯಶ್ಚಿತ್ತ ಅನಿಭವಿಸಬೇಕಾಗುತ್ತದೆ. ಹುಷಾರ್ ಎಂದು ಗರಂ ಆಗಿ ರಾಜಣ್ಣಗೆ ಎಚ್ಚರಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





