ಬೆಂಗಳೂರು: ಕನ್ನಡಕ್ಕೆ ರೋಚಕ ಇತಿಹಾಸವಿದೆ, ಮಾತೃ ಭಾಷೆ ಸದಾ ಅಭಿವೃದ್ಧಿಯಾದಾಗ ಕನ್ನಡ ಮತ್ತು ಕನ್ನಡಿಗರ ಬದುಕು ಬೆಳೆಯುತ್ತದೆ.ಈ ಅರಿವಿನಿಂದ ನಾವು ಕೆಲಸ ಮಾಡಬೇಕು. ಇತರೆ ಭಾಷೆಗಳನ್ನು ಕಲಿಯುವುದು ಹಾಗು ಬಳಕೆ ಮಾಡುವುದು ದೊಡ್ಡ ತಪ್ಪು ಎನ್ನುವುದಕ್ಕಿಂತ ನಮ್ಮ ಭಾಷೆಯನ್ನು ಎಷ್ಟು ಬಳಸಿ ಹಾಗೂ ಬೆಳೆಸುತ್ತೇವೆ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡ ರಥ-ಕಾಯಕ ಪಥ ಪುಸ್ತಕ ಲೋಕಾರ್ಪಣೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂರು ದಶಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು, ಗೋಕಾಕ್ ಚಳವಳಿಯಿಂದ ಕನ್ನಡದಲ್ಲಿ ದೊಡ್ಡ ಬದಲಾವಣೆ ಆಗಿದೆ. ಕನ್ನಡ ನಾಡಿನ ಜನಸಾಮಾನ್ಯರು, ವಿದ್ಯಾರ್ಥಿಗಳು, ರೈತರು, ಸಾಹಿತಿಗಳು, ಕೂಲಿಕಾರ್ಮಿಕರು ಎಲ್ಲರೂ ಚಳವಳಿಗೆ ಧುಮುಕಿದ್ದರು. ಕನ್ನಡದ ಪ್ರಜ್ಞೆ ಕಾಯ್ದುಕೊಳ್ಳಲು ಕನ್ನಡ ಕಾವಲು ಸಮಿತಿ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ನೇಮಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ರೂಪಾಂತರವಾಯಿತು. ಹೀಗೆ ಕನ್ನಡದ ಅಭಿವೃದ್ಧಿಗೆ ದೊಡ್ಡ ಶಕ್ತಿ ಸಿಕ್ಕಿತು ಎಂದು ನುಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





