ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಈದ್ ಉಲ್ ಅಧಾ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು. ದೇಶಾದ್ಯಂತ ಭಾನುವಾರ ಈದ್ ಉಲ್ ಅಧಾ (ಬಕ್ರೀದ್) ಆಚರಣೆ ಮಾಡಲಾಗುತ್ತಿದೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ‘ಈದ್ ಮುಬಾರಕ್! ಈದ್ ಉಲ್ ಅಧಾ ಶುಭಾಶಯಗಳು’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ಈ ಹಬ್ಬ ಮಾನವಕುಲದ ಒಳಿತಿಗಾಗಿ ಸಾಮೂಹಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸಲು ಕೆಲಸ ಮಾಡಲು ನಮಗೆ ಸ್ಫೂರ್ತಿಯಾಗಲಿ” ಎಂದು ಮೋದಿ ಹೇಳಿದ್ದಾರೆ.