ಹುಬ್ಬಳ್ಳಿ: ಜಲಮಂಡಳಿ ಹಾಗೂ ಖಾಸಗೀಕರಣದ ಹಗ್ಗ ಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ. ಆದರೆ ಜನರ ಸಮಸ್ಯೆಗಳಿಗೆ ಮಾತ್ರ ಯಾವುದೇ ರೀತಿಯಲ್ಲಿ ಬ್ರೇಕ್ ಬಿದ್ದಿಲ್ಲ. ಸರಿಯಾದ ನಿರ್ವಹಣೆ ಕೊರತೆಯಿಂದ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುವಂತಾಗಿದೆ.
ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಸಮಸ್ಯೆ ಎದುರಾಗಿರುವುದು ಒಂದು ಕಡೆಯಾದರೇ ವೆಟ್ ವೆಲ್ ನಿರ್ವಹಣೆ ಕೊರತೆಯಿಂದ ಜನರು ಸಮಸ್ಯೆ ಸಿಲುಕಿಕೊಂಡಿದ್ದು, ಮಳೆಗಿಂತ ವೆಟ್ ವೆಲ್ ಸೋರಿಕೆ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹುಬ್ಬಳ್ಳಿಯ ಲೋಹಿಯಾನಗರದ ಹತ್ತಿರದ ಗಿರಿನಗರದ ವೆಟ್ ವೆಲ್ ಪಾಲಿಕೆ ಹಾಗೂ ಜಲಮಂಡಳಿಯವರ ನಿಷ್ಕಾಳಜಿಯಿಂದ ನಿರ್ವಹಣೆ ಇಲ್ಲದೇ ಓವರ್ ಪ್ಲೋ ಆಗಿ ದೊಡ್ಡ ಪ್ರಮಾಣದ ನೀರು ಹರಿದು ರಸ್ತೆಗೆ ಬರುತ್ತಿದೆ.
ಇನ್ನೂ ವೆಟ್ ವೆಲ್ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಖಾಲಿ ನಿವೇಶನದಲ್ಲಿ ನೀರು ನಿಂತುಕೊಂಡು ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ಇನ್ನೂ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಾರ್ವಜನಿಕರು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಸೂಕ್ತ ಕ್ರಮಗಳನ್ನು ಜರುಗಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





