Breaking News

ಕಿಡ್ನಿಯನ್ನು ಅಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ವರ್ಗಾವಣೆ

ಧಾರವಾಡ -15 ರ ಯುವತಿಯ ಹೃದಯವನ್ನು ಧಾರವಾಡದ ಎಸ್ ಡಿ ಎಂ ಹಾಸ್ಪಿಟಲ್ ನಿಂದ ಬೆಳಗಾವಿಯ ಕೆ.ಎಲ್ ಇ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ತಂದು ಮುಸ್ಲಿಂ ಯುವಕನಿಗೆ ಈ ಹೃದಯ ಕಸಿ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಅಂಗಾಗ ಬೆಳಗಾವಿಗೆ ಬರುತ್ತಿದೆ.

ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಕಿಡ್ನಿಯನ್ನು ಅಂಬ್ಯುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ಮೂಲಕ ಬೆಳಗಾವಿಗೆ ತರಲಾಗುತ್ತಿದೆ.ಇನ್ನು ಕೆಲವೇ ಕ್ಷಣಗಳಲ್ಲಿ ಈ ಅಂಬ್ಯುಲೆನ್ಸ್ ಬೆಳಗಾವಿಗೆ ತಲುಪಲಿದೆ.

ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಖುದ್ದಾಗಿ ನಿಂತು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು, ಇತ್ತ ಕೆ.ಎಲ್ ಇ ಆಸ್ಪತ್ರೆಯಲ್ಲಿ ಧಾರವಾಡದಿಂದ ಬರುತ್ತಿರುವ ಕಿಡ್ನಿಯನ್ನು ಮತ್ತೊಬ್ಬನಿಗೆ ಜೋಡಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *