ಹುಬ್ಬಳ್ಳಿ ಧಾರವಾಡ ಚುನಾವಣೆಗೆ ಎರಡು ತಿಂಗಳು ಬಾಕಿ ಇರೋವಾಗಲೇ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಟಿಕೆಟ್ ಘೋಷಣೆಗೂ ಮುನ್ನವೇ ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ,ಕಾಂಗ್ರೆಸ್ ಆಕಾಂಕ್ಷಿಗಳು ಮತದಾರರ ಒಲುವಿಗೆ ಗಿಫ್ಟ್ ಹಂಚುತ್ತಿದ್ದರೆ,

ಮತ್ತೊಂದೆಡೆ ಕೈ ಟಿಕೆಟ್ ಆಕಾಂಕ್ಷಿಗಳು ಗಿಫ್ಟ್ ಹಂಚಿ ಸುದ್ದಿಯಾಗಿದ್ದಾರೆ. .ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಮ್ ಹುದ್ದಗೆ ಸಿದ್ದು, ಡಿಕೆ ನಡುವೆ ವಾರ್ ನಡೆದಿದ್ರೆ ,ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೈ ನಾಯಕರ ನಡುವೆ ಫ್ಯಾನ್ ಕುಕ್ಕರ್ ವಾರ್ ನಡಿದದೆ… ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸುಮಾರು 10 ಕ್ಕೂ ಹೆಚ್ಚು ಜನ ಟಿಕೆಟ್ ಗಾಗಿ ಅರ್ಜಿ ಹಾಕಿದದ್ದು, ಟಿಕೆಟ್ ಗಾಗಿ ಇಬ್ಬರ ನಾಯಕರ ನಡುವೆ ಫ್ಯಾನ್ ಕುಕ್ಕರ್ ವಾರ ನಡಿದಿದೆ.
ಟಿಕೆಟ್ ಗಾಗಿ ಡಿಕೆ ಶಿವಕುಮಾರ್ ಬಣದ ಟಿಕೆಟ್ ಆಕಾಂಕ್ಷಿಯೊಬ್ಬರು, ಕ್ಷೇತ್ರದಲ್ಲಿ ಕುಕ್ಕರ್ ಹಂಚುವುದರ ಮೂಲಕ ಮತದಾರರ ಮನವೊಲವಿಗೆ ಮುಂದಾಗಿದ್ದಾರೆ .ಅಷ್ಟೇ ಅಲ್ಲದೆ ತಮ್ಮ ಭಾವಚಿತ್ರ ಇರೋ ಆಟೋ ಟಾಪ್ ಕವರ್,ಕುಕ್ಕರ್,ಪಾತ್ರೆ ,ಹಂಚು ಗಿಫ್ಟ್ ನೀಡಿದ್ದಾರೆ. ಆದ್ರೆ

ಇದಕ್ಕೆ ಪ್ರತಿಯಾಗಿ ಸಿದ್ದು ಬಣದ ಟಿಕೆಟ್ ಆಕಾಂಕ್ಷಿಯೊಬ್ಬರು ಫ್ಯಾನ್ ಹಂಚುತ್ತಿದ್ದಾರೆ. ಇವರು ಸಹಾ ಟೋ ಡ್ರೈವರ್ ಗಳನ್ನು ಟಾರ್ಗೆಟ್ ಮಾಡಿ ಸುಮಾರು 2000 ಜನರಿಗೆ ಆಟೋ ಟಾಪ್ ಕವರ್, ಫ್ಯಾನ್ ಹಂಚುತ್ತಿದ್ದಾರೆ. ಕೆಲವರು ಬಿಸಿಯಾಗೋದನ್ನ ಕೊಟ್ರೆ ನಾನು ತಂಪಾಗಲಿ ಅಂತಾ ಫ್ಯಾನ್ ಕೊಡ್ತೀನಿ ಎಂದು ಪರೋಕ್ಷವಾಗಿ ಒಬ್ಬರಿಗೊಬ್ಬರು
ಕಿಡಿಕಾರುತ್ತಿದ್ದಾರೆ.

ಒಟ್ಟಾರೆ ಸಿಎಮ್ ಗಾಗಿ ಡಿಕೆ ಸಿದ್ದು ಬಣಗಳ ನಡುವೆ ಪೈಪೋಟಿ ನಡೆದ್ರೆ, ಇಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ಫ್ಯಾನ್ ಕುಕ್ಕರ್ ವಾರ್ ನಡಿದಿದೆ. ಇನ್ನು ಟಿಕೆಟ್ ಘೋಷಣೆ ಆಗೋ ಮುನ್ನವೇ ಸಿದ್ದು ಬಣ ,ಡಿಕೆ ಬಣಗಳ ನಡುವೆ ಪೈಪೋಟಿ ಆರಂಭವಾಗಿದ್ದು, ಆಕಾಂಕ್ಷಿಗಳು ಮತದಾರರ ಒಲುವಿಗಾಗಿ ಜಿದ್ದಿಗೆ ಬಿದ್ದಿರೋದು ಮಾತ್ರ ವಿಪರ್ಯಾಸ…
bigtvnews | Hubli Dharwad News | Kannada News | Karnataka News Hubli News | News In Hubli | Local news

