Breaking News

ರಾಜ್ಯದಾದ್ಯಂತ ಲಂಚ ಮುಕ್ತ ಕರ್ನಾಟಕ್ಕೆ ಹೋರಾಟ : ರವಿಕೃಷ್ಣಾ ರೆಡ್ಡಿ


ರಾಣೆಬೆನ್ನೂರು: ‘ಕರ್ನಾಟಕವನ್ನು ಕೇಂದ್ರವಾಗಿಸಿಕೊಂಡು ಒಕ್ಕೂಟ ವ್ಯವಸ್ಥೆ ಬಲಪಡಿಸುವುದು, ಕರ್ನಾಟಕದ ಅಸ್ಮಿತೆಯ ಹಿತಾಸಕ್ತಿ ಕಾಪಾಡುವುದೇ ಕೆಆರ್‌ಎಸ್‌ ಪಕ್ಷದ ಮುಖ್ಯ ಉದ್ದೇಶ. ಅರ್ಹ ಪ್ರಾಮಾಣಿಕ, ವಿದ್ಯಾವಂತ, ಸಾಮಾನ್ಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್‌ ನೀಡಲಾಗುವುದು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನುಡಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ರಾಜ್ಯದಾದ್ಯಂತ ಲಂಚ ಮುಕ್ತ ಕರ್ನಾಟಕ ಮಾಡಲು 2019ರಲ್ಲಿ ಕರ್ನಾಟಕರ ರಾಷ್ಟ್ರ ಸಮಿತಿ ಪಕ್ಷ ಉದಯವಾಯಿತು. ಭ್ರಷ್ಟಾಚಾರದ ರಾಜಕಾರಣ ಕೊನೆಗೊಳಿಸಲು ಕೆಆರ್‌ಎಸ್‌ ಪಕ್ಷ ಎರಡನೇ ಹಂತದ ಕರ್ನಾಟಕ ನವ ಚೈತನ್ಯ ಯಾತ್ರೆ ಹಮ್ಮಿಕೊಂಡಿದೆ’ ಎಂದರು.

‘ಕರ್ನಾಟಕ ರಾಜ್ಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೆಂದೂ ಕಾಣದ ಅಧೋಗತಿಯನ್ನು ತಲುಪಿದೆ. ಕಳೆದ ಎರಡು ದಶಕಗಳಿಂದ ಆಡಳಿತ ನಡೆಸಿದ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಅನೀತಿಯಿಂದ ಭ್ರಷ್ಟಾಚಾರ, ದುರಾಡಳಿತ ಮತ್ತು ಅಕ್ರಮಗಳ ಕಾರಣ ಎದುರಾದ ಸ್ಥಿತಿ ಇದಾಗಿದೆ. ಬಿಜೆಪಿ ಸರ್ಕಾರ ಹಿಂದಿನ ಎಲ್ಲ ಸರ್ಕಾರಗಳನ್ನು ಮೀರಿಸಿದೆ’ ಎಂದು ಟೀಕಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *