ಬಾಗಲಕೋಟೆ : ಚಿತ್ತೂರು ಅಪಘಾತದಲ್ಲಿ ಸಾವಿಗೀಡಾದ ಕಾನ್ಸ್ಟೇಬಲ್ ಅನಿಲ್ ಮುಳಿಕ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮಗನನ್ನ ಕಳೆದುಕೊಂಡು ತಂದೆ-ತಾಯಿ ಗೋಳಾಡ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಅನಿಲ್ ಕಳೆದ ವಾರವಷ್ಟೇ ಊರಿಗೆ ಬಂದಿದ್ರು. ಕೆಲಸದ ಮೇಲೆ ಬಾಗಲಕೋಟೆಗೆ ಹೋಗಿದ್ದ ಅನಿಲ್ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ, ತಾಯಿ, ತಮ್ಮನನ್ನು ಭೇಟಿಯಾಗಿ ಮಾತಾಡಿಸಿ ಬಂದಿದ್ರು. ಬಡ ಕುಟುಂಬದಲ್ಲಿ ಜನಿಸಿದ್ದ ಅನಿಲ್ 2019ರ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ನೌಕರಿಗೆ ಸೇರಿದ್ರು. ಫಸ್ಟ್ ಪೋಸ್ಟಿಂಗ್ ಶಿವಾಜಿನಗರ ಠಾಣೆಗೆ ಹಾಜರಾಗಿದ್ರು. ಇನ್ನು ಅನಿಲ್ ನಿವಾಸಕ್ಕೆ ಸಹಸ್ರಾರು ಜನರು ಸೇರ್ತಿದ್ದು, ಸಾವಳಗಿ ಪೊಲೀಸರು ಕೂಡ ಭೇಟಿ ನೀಡಿ ತಂದೆ ತಾಯಿಯಿಂದ ಮಾಹಿತಿ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





