Breaking News

ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಅಸಮಾಧಾನ ವ್ಯಕ್ತ

ಹುಬ್ಬಳ್ಳಿ: ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಖಾನ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು.

ಹುಬ್ಬಳ್ಳಿಯ ಕಚ್ಚಿ ಗಾರ್ಡನ್​ನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ‌ ಸಭೆಯ ಭಾಷಣ ವೇಳೆ ಮಾತನಾಡಿದ ಅವರು, ಪ್ರಸಾದ್​ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತ ಹೇಳಿ ಸಭೆಗೆ ಬಂದಿಲ್ಲ. ಜ್ವರ ಮಗನಿಗೆ ಬಂದಿದೆಯಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದೆಯಾ ಎಂದು ಸಭೆಯಲ್ಲಿ ಬಹಿರಂಗವಾಗಿ ಕೇಳಿದರು.

ಅಬ್ಬಯ್ಯ ಯಾವತ್ತಾದರೂ ನಮ್ಮ ಬಳಿಗೆ ಬರಬೇಕು ಅವಾಗ ನಾನು ಮಾತನಾಡುವೆ. ಚುನಾವಣೆ ವೇಳೆ ಜ್ವರ ಬಂದಿದ್ದರೆ ಬರುತ್ತಿದ್ದರೋ ಇಲ್ಲವೋ?, 1 ಲಕ್ಷ ಅಲ್ಪಸಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದು ಪರೋಕ್ಷವಾಗಿ ಟಾಂಗ್ ನೀಡಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *