Breaking News

ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ 59.50 ಲಕ್ಷ ರೂ. ವಂಚನೆ



ಬೆಂಗಳೂರು: ಕೆಎಎಸ್‌ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಪರಿಚಿತ ಐಎಎಸ್‌ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ ಬರೊಬ್ಬರಿ 59.50 ಲಕ್ಷ ರೂ. ವಂಚಿಸಿದ್ದಾನೆ.

ಉತ್ತರ ಕರ್ನಾಟಕ ಮೂಲದ ಸಹಕಾರ ನಗರದ ನಿವಾಸಿ ಸವಿತಾ ಶಾಂತಪ್ಪ ಯಳಸಂಗೀಕರ್‌ ಕೊಟ್ಟ ದೂರಿನ ಆದಾರದ ಮೇಲೆ ವಿಜಯ ನಗರ ಠಾಣೆ ಪೊಲೀಸರು ಸಿದ್ದರಾಜ್‌ ಸುಭಾಷ್‌ ಚಂದ್ರ ಕಟ್ಟಿಮನಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಸ್ಫರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸವಿತಾ ವಿಜಯನಗರಕ್ಕೆ ಬಂದು ಪಿಜಿಯಲ್ಲಿ ವಾಸವಿದ್ದರು. ಸ್ನೇಹಿತೆ ಯರ ಮೂಲಕ ಸವಿತಾಗೆ ಸಿದ್ಧರಾಜು ಪರಿಚಯವಾಗಿತ್ತು. ನನಗೆ ಸಾಕಷ್ಟು ಮಂದಿ ಐಎಎಸ್‌ ಅಧಿಕಾರಿಗಳ ಪರಿಚಯವಿದೆ ಎಂದು ನಂಬಿಸಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಸವಿತಾ ಹಣ ಕೊಡಲು ಒಪ್ಪಿದ್ದರು. ಆರೋಪಿ ಸಿದ್ದರಾಜು ಸೂಚನೆಯಂತೆ 2020 ಆಗಸ್ಟ್‌ನಿಂದ ಹಂತಹಂತವಾಗಿ ಆತನ ತಂದೆ ಹಾಗೂ ಸ್ನೇಹಿತನ ಖಾತೆಗೆ 15.50 ಲ.ರೂ. ವರ್ಗಾವಣೆ ಮಾಡಿದ್ದರು. ಬಳಿಕ ಸಿದ್ದರಾಜು ಐಎಎಸ್‌ ಅಧಿಕಾರಿಗಳು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *