ಗದಗ: ಹಳ್ಳ ದಾಟಲು ವಿದ್ಯಾರ್ಥಿಗಳ ಹರಸಾಹಸ ಪಡುತ್ತಿದ್ದು, ಅಪಾಯಕಾರಿ ಹಳ್ಳದ ಮೂಲಕವೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಜಲಾವೃತವಾದ ಹಳ್ಳದ ಸೇತುವೆ ಮೇಲಿಂದಲೇ ವಿದ್ಯಾರ್ಥಿಗಳು ಶಾಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಎದುರಾಗಿದೆ.

ಸತತ ಮಳೆಯಿಂದ ಹಳ್ಳ ತುಂಬಿದ್ದು, ವಿದ್ಯಾರ್ಥಿಗಳ ಪರದಾಡುವಂತಾಗಿದೆ.
ಶಿಕ್ಷಣಕ್ಕಾಗಿ ಜೀವದ ಹಂಗು ತೊರೆದು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಕರೆ ಹಳ್ಳ ದಾಟಿಸುತ್ತಿರುವ ದೃಷ್ಯಗಳು ಇಂದು ಕಂಡುಬಂದವು. ಗ್ರಾಮಸ್ಥರು ಈಗಾಗಲೇ ಸಾಕಷ್ಟು ಬಾರಿ ಹಳ್ಳಕ್ಕೆ ದೊಡ್ಡ ಸೇತುವೆಯನ್ನು ಕಟ್ಟಲು ಶಾಸಕರಿಗೆ, ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





