ಗದಗ: ಸಿದ್ಧರಾಮೋತ್ಸವದಲ್ಲಿ ಸಿದ್ದು ಡಿಕೆಶಿ ಆಲಿಂಗನ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದರು.ಇಬ್ಬರು ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ. ಕೈ ಸನ್ನೆ ಮಾಡಿ ಹೀಗೆ ಕೂಡಿಸಿದ್ರಲ್ಲ, ಹೀಗಿದ್ದಾಗ ಎಷ್ಟರ ಮಟ್ಟಿಗೆ ಒಗ್ಗಟ್ಟಿದೆ ಅಂತ ವ್ಯಂಗ್ಯವಾಡಿದ್ರು. ಅವರು ಇಂತದ್ದೊಂದು ಸಮಾವೇಶ ಮಾಡಿ ಖುಷಿಪಟ್ಟಿರಬಹುದು. ಇಂತಹ ಸಮಾವೇಶ ಬಿಜೆಪಿಯಲ್ಲಿ ದಿನಕ್ಕೊಂದು ಮಾಡ್ತೇವೆ. ಅವರ ಅಸ್ತಿತ್ವ ಉಳಿಯಲು ವಿರೋಧ ಪಕ್ಷದವರು ಮಾಡ್ತಾರೆ.
ನಾನಾ ನೀನ ಅಂತ ತೋರಿಸಲು ಸಮಾವೇಶ ಮಾಡ್ತಾರೆ. ಇವರು ಸಂಘಟನೆ ಮಾಡಿ ಸಮಾವೇಶ ಮಾಡಿದ್ರೆ, ಕಾಂಗ್ರೆಸ್ ನಲ್ಲಿ ಶಾಸಕರಿದ್ದವರು ಸಿಎಂ ಆಗಲ್ಲ. ದೆಹಲಿಯಿಂದ ಚೀಟಿ ಬರುತ್ತೆ ಅಂತ ಇನ್ನೊಬ್ಬರು ಹೇಳಿದ್ರು ಅಂತ ಲೇವಡಿಯಾಡಿದ್ರು.
ನಮ್ಮ ಗುರಿ 150+ ನಾವೇನು ಡಂಗೂರು ಬಾರಿಸೋ ಅವಶ್ಯಕತೆ ಇಲ್ಲ.
ಸಿದ್ಧರಾಮೋತ್ಸವ ಸ್ಟೀರಾಯ್ಡ್ ಇದ್ದಂತೆ, ಸ್ಟೀರಾಯ್ಡ್ ಬಹಳ ಹೊತ್ತು ಇರಲ್ಲ, ಹಾಗೇ ಸಿದ್ಧರಾಮೋತ್ಸವ ಕಾರ್ಯಕ್ರಮ ಕೂಡ. ಸಿದ್ಧರಾಮೋತ್ಸವ ಕಾರ್ಯಕ್ರಮ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ.
8 ತಿಂಗಳವರೆಗೆ ಈ ಸ್ಟೀರಾಯ್ಡ್ ಶಕ್ತಿ ನಿಲ್ಲೋದಿಲ್ಲ ಎಂದರು.
ರಾಷ್ಟ್ರದ ಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಷ್ಟ್ರ ಧ್ವಜ ಬಿಜೆಪಿ ಸ್ವತ್ತಲ್ಲ. ಕಾಂಗ್ರೆಸ್ ನವರಿಗೆ ಆರ್.ಎಸ್.ಎಸ್, ಪ್ರಧಾನಿ ಮೋದಿ ಬೈದೇ ಇದ್ರೆ ಊಟ ಮಾಡಿದ್ದ ಜೀರ್ಣ ಆಗಲ್ಲ.
ಕೂಡಿಸುವುದುನ್ನು ಬಂದ್ ಮಾಡಿ ಪಕ್ಷೋತ್ಸವ ಮಾಡಲಿ ಅಂತ ವ್ಯಂಗ್ಯ ಮಾಡಿದ್ರು.
ಯಾವ ಹುಟ್ಟು ಹಬ್ಬದ ಕಾರ್ಯಕ್ರಮಗಳಿಗೆ ಬಿಜೆಪಿ ಹೆದುರುವುದಿಲ್ಲ. ಹುಟ್ಟು ಹಬ್ಬ ನೋಡಿ ಜನ ಓಟು ಹಾಕುವುದಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





