ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದು, ಒಬ್ಬನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಈರಣ್ಣ ವಿಠ್ಠಲ ನಾಯ್ಕರ (18) ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ (19) ಹಲ್ಲೆಗೆ ಒಳಗಾದವರು. ಆಗಸ್ಟ್ 5ರಂದು ಹಲ್ಲೆ ನಡೆದಿದ್ದು, ಆ.11ರಂದು ದೂರು ದಾಖಲಿಸಲಾಗಿದೆ. ಲಿಂಗಾಯತ ಸಮಾಜದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್ ದಾನಪ್ಪ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಂಗಪ್ಪ ನಿಂಗಪ್ಪ ಪಾಕನಟ್ಟಿ ಅವರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

