ವಿಜಯನಗರ: ಸಮಾನ್ಯರೊಬ್ಬರು ಅಸಮಾನ್ಯರಾಗಿ ಬೆಳೆಯುವುದು ಅಪರೂಪದ ಸಂಗತಿ. ಅಂತಹ ಅಪರೂಪದ ವ್ಯಕ್ತಿಯಾಗಿ ನಮ್ಮ ಕಣ್ಣಮುಂದೆ ನಿಂತಿರುವುದು ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ. ಅವರು ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಪದವಿ ಅವರನ್ನು ಅರಸಿ ಬಂದಿದೆ.
ಜೋಗತಿ ಮಂಜಮ್ಮ ಅವರಿಗೆ ಕಲಬುರಗಿ ಶರಣಬಸವ ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಎಲು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 8ಕ್ಕೆ ಶರಣಬಸವ ವಿಶ್ವ ವಿದ್ಯಾಲಯ ಘಟಿಕೋತ್ಸವದ ವೇಳೆ ಮಂಜಮ್ಮಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಬಗ್ಗೆ ತಿಳಿಸಿ ಮಂಜಮ್ಮಗೆ ಶರಣಬಸವ ವಿವಿ ಪತ್ರ ಬರೆದಿದೆ.
ಜೋಗತಿ ಮಂಜಮ್ಮ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿಯಾಗಿದ್ದು, ಸದ್ಯ ಅವರು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಆಗಿದ್ದಾರೆ. ಇದೀಗ ಅವರ ಸೇವೆಗೆ ಮತ್ತೊಂದು ಗರಿ ಸಿಕ್ಕಿದ್ದು, ಸಾಕಷ್ಟು ಅಭಿನಂದನೆಗಳು ಹರಿದು ಬರುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





