ಧಾರವಾಡ: ಭಾರತೀಯ ಸೇನೆಯಲ್ಲಿ ಸತತ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧರೊಬ್ಬರು ವಯೋಸಜಹ ಕಾಯಿಲೆಯಿಂದ ಅಸುನೀಗಿದ್ದು, ಅವರಿಗೆ ಇಡೀ ಗ್ರಾಮಸ್ಥರೆಲ್ಲ ಸೇರಿ ಗೌರವಪೂರ್ವಕ ವಿದಾಯ ಹೇಳಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಭೋವಿ ಎಂಬುವವರೇ ತಮ್ಮ 77 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದವರು.ಯಲ್ಲಪ್ಪ ಅವರು ಭಾರತೀಯ ಸೇನೆ ಸೇರಿ ಸಧೀರ್ಘ 28 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿದ್ದರು. 1987 ರಲ್ಲಿ ಸೇನೆಯಿಂದ ನಿವೃತ್ತರಾಗಿ ಬಂದು ಯಲ್ಲಪ್ಪ ಅವರು ತಮ್ಮ ಸ್ವಂತ ಊರಾದ ಹೆಬ್ಬಳ್ಳಿಯಲ್ಲೇ ನೆಲೆಸಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇಂದು ವಯೋಸಹಜ ಕಾಯಿಲೆಯಿಂದ ಯಲ್ಲಪ್ಪ ವಿಧಿವಶರಾಗಿದ್ದು, ಹೆಬ್ಬಳ್ಳಿ ಗ್ರಾಮಸ್ಥರು ಅವರಿಗೆ ಗೌರವಪೂರ್ವಕ ವಿದಾಯ ಹೇಳಿದ್ದಾರೆ. ಅದೇ ಗ್ರಾಮದ ಮಾಜಿ ಯೋಧ ಬಸವರಾಜ ಗಡಾದ ಅವರು ಯಲ್ಲಪ್ಪ ಅವರ ಪಾರ್ಥೀವ ಶರೀರದ ಮೇಲೆ ರಾಷ್ಟ್ರಧ್ವಜ ಹಾಕಿ ಗೌರವ ಸಲ್ಲಿಸಿದರು. ಆನಂತರ ಆ ರಾಷ್ಟ್ರಧ್ವಜವನ್ನು ಯಲ್ಲಪ್ಪ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

