ಮೈಸೂರು: 2022ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಅರಮನೆಗೆ ದಸರಾ ಗಜಪಡೆ ಆಗಮಿಸಲಿವೆ.
ಸದ್ಯ ಆನೆಗಳು ಮೈಸೂರು ಅರಣ್ಯ ಭವನದಲ್ಲಿದ್ದು, ಅಭಿಮನ್ಯು ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಗಜಪಡೆ ಆಗಮಿಸಿವೆ. ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಭೀಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮೀ, ಮಹೇಂದ್ರ ಸೇರಿ ಎಲ್ಲಾ ಆನೆಗಳಿಗೂ ಅರಣ್ಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್‌ರಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಲಿದ್ದಾರೆ. ಪೂಜೆ ಸಲ್ಲಿಸಿದ ನಂತರ ಅಶೋಕಪುರಂ, ಬಲ್ಲಾಳ್ ವೃತ್ತ, ಆರ್ ಟಿ ಓ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್ ವೃತ್ತ ದಸರಾ ವಸ್ತು ಪ್ರದರ್ಶನದ ರಸ್ತೆಯಿಂದ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸಲಿವೆ. ಇಂದಿನಿಂದ ಅರಮನೆಯಲ್ಲೇ ದಸರಾ ಗಜಪಡೆ ಬೀಡು ಬಿಡಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





