Breaking News

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ


ಚಿಕ್ಕಮಗಳೂರು: ಇವರೊಬ್ಬರಿಗೇನಾ ರಾಜಕೀಯ ಮಾಡೋಕೆ ಬರೋದು? ನಮಗೂ ಬರುತ್ತೆ. ಇವರಿಗಷ್ಟೇನಾ ಕಾರ್ಯಕರ್ತರು ಇರೋದು? ನಮಗೂ ಇದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ನವರ ಗೊಡ್ಡುಬೆದರಿಕೆಗೆ ಬಗ್ಗಲ್ಲ ನಾನು. ಕಾಂಗ್ರೆಸ್​ ಪಕ್ಷದಲ್ಲೂ ಕಾರ್ಯಕರ್ತರಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ಮಳೆ ಹಾನಿಪೀಡಿತ ಪ್ರದೇಶಗಳ ವೀಕ್ಷಣೆಗೆಂದು ನಿನ್ನೆ(ಗುರುವಾರ) ಕೊಡಗು ಜಿಲ್ಲೆಗೆ ಪ್ರವಾಸ ಹೋದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲಿ ಜನರಲ್​ ತಿಮ್ಮಯ್ಯ ಸರ್ಕಲ್​ ಬಳಿ ಸಿದ್ದು ಕಾರಿನತ್ತ ಮೊಟ್ಟೆ ಎಸೆದು ‘go back’ ಎಂದು ಆಕ್ರೋಶ ಹೊರಹಾಕಿದ್ದರು. ಸಿದ್ದರಾಮಯ್ಯ ಟಿಪ್ಪು ಶಿಷ್ಯ ಎಂದು ಘೋಷಣೆ ಕೂಗಿದ್ದರು. ವಿಪಕ್ಷ ನಾಯಕರತ್ತ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಈಗಾಗಲೇ ಮಡಿಕೇರಿಯಲ್ಲಿ ಸುಮಾರು 7 ಜನರನ್ನ ಬಂಧಿಸಲಾಗಿದೆ. ಅತ್ತ ಬಿಜೆಪಿ ವಿರುದ್ಧ ಬೆಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *