ಮೈಸೂರು: ಈ ಬಾರಿಯ ದಸರಾ ಮಹೋತ್ಸ ಹಿನ್ನೆಲೆ ಮೈಸೂರು ನಗರದ ಪ್ರಮುಖ ವೃತ್ತ, ರಸ್ತೆ ಸೇರಿದಂತೆ ಒಟ್ಟು 110 ಕಿಲೋ ಮೀಟರ್ ದೀಪಾಲಂಕಾರಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಪ್ರತಿವರ್ಷ ದಸರಾದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅದು ದೀಪಾಲಂಕಾರ.
ಸಾವಿರಾರು ಪ್ರವಾಸಿರು, ಸ್ಥಳೀಯರು ಈ ದೃಶ್ಯದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಮೈಸೂರಿನ ಹೃದಯ ಭಾಗದ ಪಾರಂಪರಿಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ವೃತ್ತಗಳು, ಮುಖ್ಯ ಜಂಕ್ಷನ್‌ಗಳನ್ನು ಒಳಗೊಂಡಂತೆ ವಿವಿಧೆಡೆ ದೀಪಾಲಂಕಾರ ಮಾಡಲಾಗುತ್ತದೆ.
ದಸರಾ ಸಮಯದಲ್ಲಿ ಸಂಜೆ 7 ಗಂಟೆ ಆಗುತ್ತಿದ್ದಂತೆ ವಾಹನಗಳಲ್ಲಿ ಮೈಸೂರು ನಗರದತ್ತ ಜನಸಾಗರವೇ ಆಗಮಿಸುತ್ತದೆ. ನಗರ ಪ್ರದಕ್ಷಿಣೆ ಮೂಲಕ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ನಗರದ ಜಯಚಾಮರಾಜ ಒಡೆಯರ್ ವೃತ್ತ, ಕೆ. ಆರ್. ವೃತ್ತ, ಆಯುರ್ವೇದಿಕ್ ವೃತ್ತ, ರೈಲು ನಿಲ್ದಾಣ, ಮಿಲೇನಿಯಂ ವೃತ್ತ, ಗನ್ ಹೌಸ್ ಸರ್ಕಲ್, ಏಕಲವ್ಯ ವೃತ್ತ, ಕುರುಬರಹಳ್ಳಿ ವೃತ್ತ ಸೇರಿದಂತೆ 20ಕ್ಕೂ ಹೆಚ್ಚು ವೃತ್ತಗಳನ್ನು ಅಲಂಕೃತಗೊಳಿಸಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

