ಬೆಂಗಳೂರು: ಕರ್ನಾಟಕದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಎಲ್ಲಾ ಘಟಕಾಧಿಕಾರಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಲಾಗಿದೆ. ಕೆಎಸ್‌ಪಿ (ಡಿಪಿ) ನಿಯಮ 6 ರನ್ವಯ ಅಪಾದಿತ ಪೊಲೀಸ್ ಅಧಿಕಾರಿ (ಸಿಬ್ಬಂದಿಗಳ ವಿರುದ್ಧ ಕ್ರಮಬದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.ಡಿಜಿ & ಐಜಿಪಿ ಅವರಿಂದ ಅನುಮೋದಿಸಲ್ಪ ಸುತ್ತೋಲೆಯನ್ನು (ಸೌಮೇಂದು ಮುಖರ್ಜಿ, ಐಪಿಎಸ್) ಎಡಿಜಿಪಿ (ಆಡಳಿತ) ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ರವರ ಪರವಾಗಿ ಹೊರಡಿಸಿದ್ದಾರೆ. ಕಛೇರಿಯ ಸುತ್ತೋಲೆ ದಿನಾಂಕ 15/04/2023, ಕರ್ನಾಟಕ ರಾಜ್ಯ (ಶಿಸ್ತು ನಡವಳಿಗಳು) ನಿಯಮಗಳು 1965/89ರ ಮತ್ತು ತಿದ್ದುಪಡಿ ಆದೇಶ ದಿನಾಂಕ 18/10/2022 ಅನ್ನು ಸುತ್ತೋಲೆ ಒಳಗೊಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

