ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯ ವಿವಾದದ ಕಾರಣಗಳಿಂದಲೇ ಸುದ್ದಿಯಲ್ಲಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಧಾರವಾಹಿ ತಂಡದಿಂದ ಗೇಟ್ಪಾಸ್ ಪಡೆದಿದ್ದಾರೆ.
ಅಲ್ಲದೇ ಕಿರುತೆರೆಯಿಂದ 2 ವರ್ಷಗಳ ನಿಷೇಧವನ್ನೂ ಅನುಭವಿಸುತ್ತಿದ್ದಾರೆ. ಅನಿರುದ್ಧ ಜತ್ಕರ್ ಹಾಗೂ ಆರೂರು ಜಗದೀಶ್ ನಡುವಿನ ಗುದ್ದಾಟದಿಂದ ಧಾರವಾಹಿಗೆ ಇದೀಗ ಮುಖ್ಯ ಪಾತ್ರಧಾರಿ ಇಲ್ಲದಂತಾಗಿದೆ.
ಜೊತೆ ಜೊತೆಯಲಿ ಧಾರವಾಹಿ ತಂಡವು ಇದೀಗ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿದೆ. ಈಗಾಗಲೇ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ಕರುನಾಡ ಜನತೆಯ ಮನಸ್ಸನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈ ಪಾತ್ರಕ್ಕಾಗಿ ಸೂಕ್ತವಾದ ಕಲಾವಿದನನ್ನು ಆಯ್ಕೆ ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಇದೀಗ ಧಾರವಾಹಿ ತಂಡದ ಮೇಲಿದೆ . ಹೌದು.. ನಿರ್ದೇಶಕ ಅನೂಪ್ ಭಂಡಾರಿಗೆ ಈ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವಂತೆ ಆಫರ್ ಬಂದಿದೆಯಂತೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

