ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು. ಈ ಭಾವನಾತ್ಮಕ ಘಟನೆ ನೋಡಿ ನೆರೆದಿದ್ದ ಜನರು ಸಹ ಭಾವುಕರಾದರು. ಇನ್ನು ಹೋರಿ ಬಿದ್ದು ಕಾಲು ಮುರಿದರೂ ಸಹ ಓಡಿರುವ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಸದ್ಯ ಒಂದು ಕಾಲು ಮುರಿದುಕೊಂಡಿರುವ ಹೋರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

