Breaking News

ರಸ್ತೆ ಗುಂಡಿಯಿಂದಾಗಿ ಬೈಕ್ ಸ್ಕಿಡ್ ಆಗಿ ಮತ್ತೊಂದು ಜೀವ ಬಲಿ


ಬೆಂಗಳೂರು : ಕಾಲೇಜಿಗೆ ತನ್ನ ಮಗಳನ್ನು ಬಿಟ್ಟು ವಾಪಾಸ್ ಆಗುತ್ತಿದ್ದ ವೇಳೆ ರಸ್ತೆ ಗುಂಡಿಯಿಂದಾಗಿ ಬೈಕ್ ಸ್ಕಿಡ್ ಆಗಿ ಮತ್ತೊಂದು ಜೀವ ಬಲಿಯಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಹೇರೋಹಳ್ಳಿ ಮುಖ್ಯ ರಸ್ತೆಯ ಗುಂಡಿಯಿಂದ ಸುಪ್ರೀತ್ (44) ಎಂಬ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಆಗಸ್ಟ್ 18ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರಸ್ತೆ ಗುಂಡಿಯಿಂದಾಗಿ ಬೈಕ್ ಸ್ಕಿಡ್ ಆಗಿ ಸುಪ್ರೀತ್ ನೆಲಕ್ಕೆ ಬಿದ್ದಿದ್ದಿದ್ದಾರೆ. ಇನ್ನು, ಆಗಸ್ಟ್ 18ರಂದು ಬಿದ್ದು ಗಂಭೀರಗಾಯಗೊಂಡಿದ್ದ ಸುಪ್ರೀತ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಕಾರಿಯಾಗದೆ ಆಗಸ್ಟ್ 22ರ ಮುಂಜಾನೆ ಮೃತರಾಗಿದ್ದಾರೆ. ಸುಪ್ರೀತ್ ರಸ್ತೆ ಗುಂಡಿಯಿಂದಾಗಿ ಮಗಚಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *