Breaking News

ಸಾಲದ ಬಾಧೆ : ಉದ್ಯಮಿ ಆತ್ಮಹತ್ಯೆ


ಬಳ್ಳಾರಿ: ಸಾಲದ ಬಾಧೆ ರೈತರನ್ನಷ್ಟೇ ಅಲ್ಲ, ಉದ್ಯಮಿಗಳನ್ನೂ ಕಾಡುತ್ತಿದೆ. ಅವರು ಕೂಡ ಸಾಲಕ್ಕೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಅಂಥ ಸಾವಿನ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆ ಆಗಿದೆ. ಸಾಲದ ಕಂತು ಕಟ್ಟಲಾಗದೆ ಎರಡು ಲಾರಿ ಮಾಲೀಕರೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂಕಮನಾಳ ಬಳಿ ಈ ಆತ್ಮಹತ್ಯೆ ನಡೆದಿದೆ. ತುಂಬರಗುದ್ದಿ ಗ್ರಾಮದ ಕರಿಯಪ್ಪ ಎಂಬವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಎರಡು ಲಾರಿ ಹೊಂದಿದ್ದು, ಆ ಮೂಲಕ ವಹಿವಾಟು ನಡೆಸುತ್ತಿದ್ದರು.

ಎರಡು ಲಾರಿಗಳನ್ನು ಹೊಂದಿದ್ದರು ಕೂಡ ತಿಂಗಳ ಅಂತ್ಯದಲ್ಲಿ ಸಾಲದ ಮಾಸಿಕ ಕಂತು ಕಟ್ಟಲು ಕರಿಯಪ್ಪ ಪರದಾಟ ನಡೆಸುವಂತೆ ಆಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಕರಿಯಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಚೊರನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *