Breaking News

ಗುತ್ತಿಗೆದಾರರ ಸಂಘದವರು ಸರಕಾರವನ್ನು ಟೀಕೆ ಮಾಡಿದ್ದಾರೆ


ಉಡುಪಿ: ಗುತ್ತಿಗೆದಾರರ ಸಂಘದವರು ಸರಕಾರವನ್ನು ಟೀಕೆ ಮಾಡಿದ್ದಾರೆ. ನಮ್ಮ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳ ಕಟ್ಟಡದ ಹಣ ಪಾವತಿ ಬಾಕಿ ಇದೆ ಎಂದಿದ್ದಾರೆ. ಸುಮಾರು 1,100 ಕೋ.ರೂ. ನೀಡಲು ಬಾಕಿ ಇದೆ. ಕೊರೋನಾದಿಂದ ಉಂಟಾಗಿರುವ ಎರಡು ವರ್ಷಗಳ ಆರ್ಥಿಕ ಕೊರತೆಯಿಂದ ಬಾಕಿ ಇರಿಸಲಾಗಿದೆ.

ಈ ಆರ್ಥಿಕ ವರ್ಷದಲ್ಲಿ 700 ಕೋ.ರೂ. ನೀಡಲಾಗಿದೆ. ಈಗಾಗಲೇ 110 ಕೋ.ರೂ.ಗಳ ಎರಡು ಕಂತುಗಳ ಹಣ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಈ ಕುರಿತು ವೆಬ್‌ಸೈಟ್‌ನಲ್ಲಿ ಅನೌನ್ಸ್‌ ಮಾಡಿದ್ದೇವೆ. ಮೊದಲು ಕೊಟ್ಟವರು, ಕೊನೆಗೆ ಕೊಟ್ಟವರು, ಆಮಿಷ ಒಡ್ಡಿದವರು ಯಾವುದನ್ನೂ ಪರಿಗಣಿಸಿಲ್ಲ. ಯಾರಿಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿದೆ. ಜ್ಯೇಷ್ಠತೆಯ ಪಟ್ಟಿ ತಪ್ಪಿ ಹೋಗಿದ್ದರೆ ಹೇಳಲಿ. ಬಾಕಿ ಹಣವನ್ನು ಮರು ಹೊಂದಾಣಿಕೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ. ಬೇರೆ ಯಾವುದಾದರೂ ಇಲಾಖೆಯಲ್ಲಿ ಹಣ ಉಳಿದಿದ್ದರೆ ಹೊಂದಾಣಿಕೆ ಮಾಡುತ್ತೇವೆ ಎಂದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *