ಉತ್ತರ ಪ್ರದೇಶ ಗಾಜಿಯಾಬಾದ್ ಇವರ ಮೂಲ. ರಜೆಯು ದುರಂತದಲ್ಲಿ ಕೊನೆಗೊಂಡಿತ್ತು. ವಿನೋದ್ ಕುಮಾರ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿ ಬಳಿಕ ಮೂವರು ನಾದಿನಿಯರನ್ನು ರಕ್ಷಿಸಲು ಹೋಗಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬವು ಡಿಸೆಂಬರ್ 4 ರಂದು ಗೋವಾಕ್ಕೆ ಆಗಮಿಸಿ ಬಾಗಾದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು.ಶನಿವಾರ ರಾತ್ರಿ ಅವರು ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಬೆಂಕಿ ಹೊತ್ತಿಕೊಂಡಾಗ ಕೇವಲ 15 ನಿಮಿಷಗಳ ಕಾಲ ಒಳಗೆ ಇದ್ದರು. ಬೆಂಕಿ ಹರಡುತ್ತಿದ್ದಂತೆ, ವಿನೋದ್ ಕುಮಾರ್ ತನ್ನ ಪತ್ನಿ ಭಾವನಾ ಜೋಶಿಯನ್ನು ಮುಖ್ಯ ದ್ವಾರದ ಮೂಲಕ ಹೊರಗೆ ತಳ್ಳಿ, ನಾದಿನಿಯರನ್ನು ಕಾಪಾಡಲು ಮತ್ತೆ ಒಳಗೆ ಹೋಗಿದ್ದರು. ಭಾವನಾ ಅವರ ಮೂವರು ಸಹೋದರಿಯರಾದ ಅನಿತಾ, ಸರೋಜ್ ಮತ್ತು ಕಮಲಾ ಅವರನ್ನು ರಕ್ಷಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

