ಉತ್ತರ ಪ್ರದೇಶ: ಹೃದಯಾಘಾತದಿಂದ ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಬಿಜೆಪಿ ಶಾಸಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗೋಲ ಗೋಕರನಾಥ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಗಿರಿ ಮೃತ ಶಾಸಕ. ಇವರು ಇಂದು (ಮಂಗಳವಾರ) ಮುಂಜಾನೆ ತಮ್ಮ ಕಾರಿನಲ್ಲಿ ಲಕ್ಕೋಗೆ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಪ್ರಾಣಾಪಕ್ಷಿ ಹಾರಿ ಹೋಗಿದೆ.ಶಾಸಕ ಗಿರಿ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ
ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

