Breaking News

ಕ್ವೀನ್ ಎಲಿಜಬೆತ್ ರಾಣಿ ನಿಧನಕ್ಕೆ ಮೋದಿ ‌ಸಂತಾಪ



ಕ್ವೀನ್ ಎಲಿಜಬೆತ್.. ಬ್ರಿಟಿಷರ ನಾಡನ್ನು ಸುದೀರ್ಘ ಅವಧಿಗೆ ಆಳಿದ ರಾಣಿ. 96 ವರ್ಷ ವಯಸ್ಸಿನ 2ನೇ ಎಲಿಜಬೆತ್, ಬ್ರಿಟನ್​​ನ ಬಲ್​ಮೋರಾಲ್​ನಲ್ಲಿ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಜಗತ್ತಿನ ಎಲ್ಲಾ ದೇಶಗಳು ಸಂತಾಪ ಸೂಚಿಸಿವೆ.ಅನಾರೋಗ್ಯದಿಂದ ಬ್ರಿಟನ್ ರಾಣಿ ಎಲಿಜಬೆತ್-2 ಕೊನೆಯುಸಿರು..

1926ರಲ್ಲಿ ಲಂಡನ್​​ನ ಮೇಫೇರ್​​ನಲ್ಲಿ ಜನಿಸಿದ್ದ ರಾಣಿ ಎಲಿಜಬೆತ್ ಪೂರ್ಣ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ. 1952ರಿಂದ ಬ್ರಿಟನ್ ರಾಣಿಯಾಗಿ ಎಲಿಜಬೆತ್ ಆಯ್ಕೆಯಾಗೋ ಮೂಲಕ ತಮ್ಮ 25 ವಯಸ್ಸಿನಲ್ಲಿ ಇಂಗ್ಲೆಂಡ್ ರಾಣಿಯಾಗಿ ಪಟ್ಟಕ್ಕೇರಿದ್ದರು. ಹೀಗೆ ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇನ್ನು ಇದೇ ವರ್ಷ ಜೂನ್​​ನಲ್ಲಿ ರಾಣಿ ಎಲಿಜಬೆತ್ ವಜ್ರ ಮಹೋತ್ಸವವನ್ನೂ ಅದ್ಧೂರಿಯಾಗಿ ಆಚರಿಸಲಾಗಿತ್ತು. ಇನ್ನು ತಮ್ಮ ಆಳ್ವಿಕೆಯಲ್ಲಿ 15 ಪ್ರಧಾನಿಗಳನ್ನು ರಾಣಿ ಎಲಿಜಬೆತ್ ನೇಮಕ ಮಾಡಿದ್ದಾರೆ.

ಎಲಿಜಬೆತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ..

ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರೋ ಪ್ರಧಾನಿ ಮೋದಿ 2015 ಹಾಗೂ 2018ರಲ್ಲಿ ಬ್ರಿಟನ್​ಗೆ ಹೋದಾಗ ಭೇಟಿಯಾಗಿದ್ದೆ. ಅವರ ಭೇಟಿಯನ್ನ ನಾನು ಎಂದಿಗೂ ಮರೆಯೋದಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *