Breaking News

ಹಿರಿಯ ಪುರಾತತ್ವ ಶಾಸ್ತ್ರಜ್ಞ ಬೃಜ್‌ಬಾಸಿ ಲಾಲ್‌ ನಿಧನ


ನವದೆಹಲಿ(ಪಿಟಿಐ): ಪದ್ಮವಿಭೂಷಣ ಪುರಸ್ಕೃತ ಹಿರಿಯ ಪುರಾತತ್ವ ಶಾಸ್ತ್ರಜ್ಞ ಬೃಜ್‌ಬಾಸಿ ಲಾಲ್‌ (101) ಶನಿವಾರ ಇಲ್ಲಿ ನಿಧನರಾದರು.

ಬಿ.ಬಿ.ಲಾಲ್‌ ಅವರು ಭಾರತೀಯ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಾಗಿದ್ದರು. ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಉತ್ಖನನ ವೇಳೆ ದೇವಸ್ಥಾನ ಮಾದರಿಯ ನಾಲ್ಕು ಕಂಬಳನ್ನು ಅವರು ಗುರುತಿಸಿದ್ದರು. ಅಯೋಧ್ಯೆಯಲ್ಲಿ ಮಂದಿರ ಇತ್ತು ಎಂಬ ವಾದಕ್ಕೆ ಇದುವೇ ಪ್ರಮುಖ ಸಾಕ್ಷ್ಯವಾಗಿ ಬದಲಾಗಿತ್ತು.

ಲಾಲ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಸ್ಕೃತಿ ಸಚಿವ ಕೃಷ್ಣಾ ರೆಡ್ಡಿ ಅವರು ಕಂಬನಿ ಮಿಡಿದಿದ್ದಾರೆ. ‘ಸಂಸ್ಕೃತಿ ಮತ್ತು ಪುರಾತತ್ವ ಶಾಸ್ತ್ರಕ್ಕೆ ಲಾಲ್ ಅಪಾರ ಕೊಡುಗೆ ನೀಡಿದ್ದಾರೆ. ಶ್ರೀಮಂತ ಗತಕಾಲದೊಂದಿಗಿನ ನಮ್ಮ ಸಂಪರ್ಕವನ್ನು ಆಳಗೊಳಿಸಿದ ಮಹಾನ್ ಬುದ್ಧಿಜೀವಿ. ಅವರ ನಿಧನದಿಂದ ನೋವಾಗಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *