ಮಂಡ್ಯ: ಇಲ್ಲಿನ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ನಿಜವಾಗಿಯೂ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡರಾ?
ಎಂಬ ಅನುಮಾನ ಈಗ ಮೂಡುತ್ತಿದೆ. ಇವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತಂತೆ. ಈ ವ್ಯಾಪಾರಿಯ ಜೊತೆಗೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡ ಯುವತಿಯೂ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆ. ಆ ಯುವತಿಯ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಲೇಟೆಸ್ಟ್ ವಿಚಾರ.
ಫೋನ್ ಮೂಲಕ ಯುವತಿ ಜಗನ್ನಾಥ್ ಶೆಟ್ಟಿ ಅವರ ಸ್ನೇಹ ಸಂಪಾದಿಸಿದ್ದಳು. ಯುವತಿಗೆ ತಾನು ಲೆಕ್ಚರರ್ ಎಂದು ಜಗನ್ನಾಥ್ ಶೆಟ್ಟಿ ಹೇಳಿಕೊಂಡಿದ್ದರು. ಶೆಟ್ಟಿ ಹೇಳಿದ್ದ ಸುಳ್ಳನ್ನೇ ಈ ಗ್ಯಾಂಗ್ ತಮ್ಮ ಬಂಡವಾಳವಾಗಿ ಮಾಡಿಕೊಂಡಿದೆ. ಅವರ ಹಿನ್ನೆಲೆ ಗೊತ್ತೇ ಇಲ್ಲ ಎನ್ನುವಂತೆ ನಾಜುಕಾಗಿ ಮಾತನಾಡಿ ಯುವತಿ ನಾಟಕವಾಡಿ ಆತನನ್ನು ಲಾಕ್ ಮಾಡಿದ್ದಾಳೆ.
ಯುವತಿಯ ಜೊತೆಗೆ ಸಲುಗೆ ಬೆಳೆಯುತ್ತಿದ್ದಂತೆ ಜಗನ್ನಾಥ್ ಶೆಟ್ಟಿ ಲಾಡ್ಜ್ಗೆ ಕರೆದಿದ್ದರು. ಶೆಟ್ಟಿ ಆಹ್ವಾನದ ಬಳಿಕ ಆತನನ್ನು ಲಾಡ್ಜ್‌ನಲ್ಲಿ ಲಾಕ್ ಮಾಡಲು ಪ್ಲಾನ್ ನಡೆದಿತ್ತು. ಯುವತಿ ರೂಂಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ಟೀಂ ಎಂಟ್ರಿಕೊಟ್ಟಿದೆ. ನಂತರ ವ್ಯಕ್ತಿಯೋರ್ವ ಅವನ್ಯಾರು ಹೇಳು?, ಇಲ್ಲಿಗೆ ಏಕೆ ಬಂದೆ? ಎಂದೆಲ್ಲೂ ಪ್ರಶ್ನಿಸಿದಾಗ, “ಫ್ರೆಂಡ್ ಮನೆಗೆ ಅಂತ ಹೇಳಿ ಇಲ್ಲಿಗೆ ಬಂದೆ, ಟ್ಯೂಷನ್ ಮುಗಿಸಿ ವಾಪಸ್ ಹೋಗುತ್ತೇನೆ. ಅವರು ನಮ್ಮ ಲೆಕ್ಚರರ್, ಅವರಿಗೆ ಏನೂ ಮಾಡಬೇಡಿ ಚಿಕ್ಕಪ್ಪ, ಚಿಕ್ಕಪ್ಪ” ಎಂದು ಶೆಟ್ಟಿ ಮುಂದೆ ಯುವತಿ ನಾಟಕೀಯವಾಗಿ ಅಲವತ್ತುಕೊಂಡಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

