Breaking News

ಹಬ್ಬಕ್ಕೆ ಬಂದ ತಾಯಿ ಮಗಳು ಸ್ಮಶಾನ ಸೇರಿದರು


ಚಂಗರಂಕುಲಂ: ಓಣಂ ಹಬ್ಬದ ರಜಾ ದಿನ ಹಿನ್ನೆಲೆಯಲ್ಲಿ ತವರಿಗೆ ಬಂದಿದ್ದ ಅಮ್ಮ-ಮಗಳು ಸ್ನಾನಕ್ಕೆಂದು ಹೋಗಿ ಕರೆ ದಂಡೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮೃತರನ್ನು ಶೈನಿ (40) ಮತ್ತು ಆಕೆಯ ಮಗಳು ಆಶ್ಚರ್ಯ (13) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಬೆಳಗ್ಗೆ ಪಡಿಂಜಟ್ಟುಮುರಿಯ ಪಲ್ಲಿಕ್ಕಾರೈನ್​ನಲ್ಲಿ ನಡೆದಿದೆ.

ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅವರನ್ನು ದಡಕ್ಕೆ ಎಳೆದು ಚಂಗರಂಕುಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *