Breaking News

ದೇಶದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್‌ ಸರ್ಕಾರ : ವಿ. ಸೋಮಣ್ಣ

ಹುಬ್ಬಳ್ಳಿ: ರಾಜ್ಯ ಸರ್ಕಾರ ಇದ್ದು ಸತ್ತಂತಾಗಿದೆ. ದೇಶದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್‌ ಸರ್ಕಾರ. ಸಿದ್ದರಾಮಯ್ಯ ಪಂಜರದ ಗಿಳಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಇದ್ದ ಗತ್ತು ಈಗಿಲ್ಲ ಎಂದು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಬಳಿಕ ಸರ್ಕಾರ ಇರುತ್ತದೋ ಇಲ್ಲೋ ಅನ್ನೋ ನಂಬಿಕೆ ಇಲ್ಲ. ಇವತ್ತು ಜನ ಅಸಹ್ಯ ಪಡುತ್ತಿದ್ದಾರೆ. ಆಟಾಟೋಪ ನಡೆಯಲ್ಲ. ಸಿದ್ದರಾಮಯ್ಯ ಯಾಕೆ ಹೀಗೆ ಆಗಿದ್ದಾರೆ ಅನ್ನೋದು ಅರ್ಥ ಆಗುತ್ತಿಲ್ಲ. ಹಳೇ ಸಿದ್ದರಾಮಯ್ಯ ಇಗಿಲ್ಲ. ಜಮೀರ್ ಅಹಮ್ಮದ್ ನನ್ನ ಸ್ನೇಹಿತ. ಅವರು ಕಾನೂನು ಓದಿಕೊಂಡು. ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *