Breaking News

ಲಾರಿ ಬಿಡಿ ಭಾಗ ಮಾರುವ ದುರುದ್ದೇಶ , ಅಂತರಾಜ್ಯ ಕಳ್ಳನ ಬಂಧನ

ಕುಂದಗೋಳ : ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನ ಕದ್ದು ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕುಂದಗೋಳ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ .

ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ . ಮಹಾರಾಷ್ಟ್ರದಿಂದ ಲಾರಿಯನ್ನು ಎಗರಿಸಿದ ಕಳ್ಳ ವಾಹನದ ನಂಬರ್ ಪ್ಲೇಟ್‌ಗೆ ಹಳದಿ ಬಣ್ಣ ಬಳಿದು , ವಾಹನ ಬಿಡಿ ಭಾಗಗಳನ್ನು ಹಾಗೂ ವಾಹನದ ಇಂಜಿನ್ ಚಸ್ಸಿ ನಂಬರ್ ಬದಲಾವಣೆ ಮಾಡಿ ಮಾರಾಟ ಮಾಡುವ ದುರುದ್ದೇಶದಿಂದ ಲಾರಿ ಕಳ್ಳತನ ಮಾಡಿದ್ದ ಎನ್ನಲಾಗಿದೆ

ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಾರುತಿ ಗುಳ್ಳಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ , ಜಿಲ್ಲಾ ಉಪಾಧೀಕ್ಷಕರಾದ ಎಸ್.ಎಂ ಸುಂಕದ , ಮಾರ್ಗದರ್ಶನದಲ್ಲಿ ಕುಂದಗೋಳ ಠಾಣಾ ಎಎಸ್‌ಐ ಎಂ.ಆರ್ ರಾಮನಾ , ಸಿ.ಎಸ್ ಬಡಿಗೇರ , ಎಂ.ಎಸ್.ಜೋಡಗೇರಿ , ಬಿ.ಎ ಶಿರಕೋಳ , ಸಾವಿತ್ರಿ ಶಿಂತ್ರಿ , ಅಮರೇಶ ಬಳಗಾರ , ಪರಮೇಶ ಗೊಂದಿ , ಎಸ್.ಡಿ ಕಳಾವಂತ ಹಾಗೂ ನಾಗರಾಜ ಹೊಸಕೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *