Breaking News

ಪ್ರೀತಂ ಗೌಡಗೆ ಸವಾಲ್ ಹಾಕಿದ ಕುಮಾರಸ್ವಾಮಿ



ಹಾಸನ :  ಜಿಲ್ಲೆಯ ಏಕೈಕ ಬಿ.ಜೆ.ಪಿ ಶಾಸಕ ಪ್ರೀತಂ ಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರಿದಿದೆ. ಹಾಸನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ನಿನ್ನ ಆಸ್ತಿ ಎಷ್ಟು, ನಮ್ಮ ಆಸ್ತಿ ಎಷ್ಟು ಹೇಳು ಎಂದು ಪ್ರೀತಂ ಗೌಡಗೆ ಸವಾಲು ಹಾಕಿದ್ದಾರೆ.

ನಮಗೆ ಇ.ಡಿ ಮತ್ತು ಐಟಿ ಬಗ್ಗೆ ಭಯವಿಲ್ಲ. ನಾವು ರಾಜಮನೆತನದವರಲ್ಲ. ರಾಹುಲ್ ಗಾಂಧಿಯಿಂದ ಜೆಡಿಎಸ್ ಪಕ್ಷ ವನ್ನು ಬಿಜೆಪಿಯ ಬಿ ಟೀಂ ಅಂತ ಸಿದ್ದರಾಮಯ್ಯ ಹೇಳಿಸಿದ್ರು. ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಜೊತೆ ಕಳೆದ ಚುನಾವಣೆಯಲ್ಲಿ ಭಾಷಣ ಮಾಡಿಸಿದ್ರು. ಇದರಿಂದ ಕಳೆದ ಬಾರಿ ಪ್ರಕಾಶ್ ಸೋಲಬೇಕಾಯಿತು. ಅದರ ಪ್ರತಿಫಲದಿಂದ ನೀನು ಎಂಎಲ್ ಎ ಆಗಿರೋದು. ದುಡಿಮೆ ಮೇಲೆ ಎಮ್.ಎಲ್.ಎ ಆದ್ರಾ ಎಂದು ಶಾಸಕ ಪ್ರೀತಂ ಗೌಡಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿರೋದನ್ನು ಗಮನಿಸಿದ್ದೇನೆ ಎಂದು ಹೇಳಿದ ಕುಮಾರಸ್ವಾಮಿ ನಮ್ಮ ದೋಷಗಳಿದ್ದರೆ, ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ. ನಿಮ್ಮ ಮನೆಯ ಮಕ್ಕಳು ಮಾಡಿದ ತಪ್ಪನ್ನು ಕ್ಷಮಿಸ್ತಿರಲ್ವಾ. ಹಾಗೇ ನಮ್ಮ ತಪ್ಪುಗಳ ಕ್ಷಮಿಸಿ ಎಂದು ಹೆಚ್ಡಿಕೆ ಹೇಳಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *