Breaking News

ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿ….

ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ ಮತ್ತು ಬನಶಂಕರಿ ದೇವಿ, ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ, ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್​ ಫಾಲ್ಸ್​, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3, ಬೀದರ್- ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ, ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ,

ಚಿಕ್ಕಮಗಳೂರು ಜಿಲ್ಲೆ-ಬೆಟ್ಟದಿಂದ ಬಟ್ಟಲಿಗೆ, ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ- ಪಿಲಕುಳ ಗುತ್ತಿನಮನೆ-ವಿವೇಕಾನಂದ ತಾರಾಲಯ-ಬೀಚ್ ಸರ್ಫಿಂಗ್, ದಾವಣಗೆರೆ-ಸಂತ ಸೇವಾವಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ, ಧಾರವಾಡ-ಧಾರವಾಡ ಪೇಡಾ, ಧಾರವಾಡದ ಎಮ್ಮೆ ನಮ್ಮ ಹೆಮ್ಮೆ, ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ದಚಿತ್ರ ಮೆರವಣಿಗೆ, ಹಾಸನ- ಹಾಸನಾಂಬ ದೇವಾಲಯ-ಹಲ್ಮಡಿ-ಈಶ್ವರ ದೇವಸ್ಥಾನ, ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಗದ್ದಿಗೆ ಕಾಗಿನೆಲೆ, ಕಲಬುರಗಿ-ರಾಜವಂಶಸ್ಥರ ಕೋಟೆ

ಚಿಂಚೋಳಿ ಅರಣ್ಯಪ್ರದೇಶ ವನ್ಯಜೀವಿ ಧಾಮ, ಕೊಡಗು ಜಿಲ್ಲೆ-ಕೊಡಗಿನ ಪ್ರೇಕ್ಷಣೀಯ ಸ್ಥಳ, ಕೋಲಾರ- ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳ- ಕಿನ್ನಾಳ ಕಲೆ ಹಾಗೂ ಕೈಮಗ್ಗ, ಮಂಡ್ಯ- ಸಾಂಪ್ರದಾಯಿಕ ಉದ್ಯಮ ಆಲೆಮನೆ, ಮೈಸೂರು- ನಾಲ್ವಡಿ ಕೃಷ್ಣರಾಜ ಒಡೆಯರ್​ ಕೊಡುಗೆಗಳು, ರಾಯಚೂರು- ನವರಂಗ ದರ್ವಾಜ ಹಾಗೂ ಆರ್​ಟಿಪಿಎಸ್​, ರಾಮನಗರ- ಚೆನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು, ಶಿವಮೊಗ್ಗ-ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ ಮತ್ತು ಚಿತ್ರದುರ್ಗ- ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋಗಳು ಭಾಗಿಯಾಗಲಿವೆ

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *