Breaking News

ಬಿಗ್​ಬಾಸ್​ ಸೀಸನ್​ 9ಗೆ ಒಟಿಟಿ ಸೀಸನ್ ವಿನ್ನರ್ ಆಗಿ ಹೊರಹೊಮ್ಮಿದ ರೂಪೇಶ್​ ಶೆಟ್ಟಿ



ಬೆಂಗಳೂರು: ಬಿಗ್​ಬಾಸ್​ ಸೀಸನ್​ 9ಗೆ ಒಟಿಟಿ ಸೀಸನ್​ನಿಂದ ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ಆರ್ಯವರ್ಧನ ಗುರೂಜಿ ಹಾಗೂ ಸಾನ್ಯಾ ಅಯ್ಯರ್​ ಆಯ್ಕೆಯಾಗಿದ್ದಾರೆ. ಟಾಪ್​ 4 ಸ್ಥಾನಕ್ಕಾಗಿ ಸಾನ್ಯಾ ಅಯ್ಯರ್​ ಹಾಗೂ ಸೋನು ಗೌಡ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಯಲ್ಲಿ ಕಿಚ್ಚ ಸುದೀಪ್ ಬಿಗ್​ ಬಾಸ್​ ಕನ್ನಡ ಒಟಿಟಿ ಸೀಸನ್​ ಒಂದರ ಟಾಪ್​ 4 ಸ್ಪರ್ಧಿ ಸಾನ್ಯಾ ಅಯ್ಯರ್ ಎಂದು ಘೋಷಣೆ ಮಾಡಿದ್ದಾರೆ.

ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಫಿನಾಲೆ ಸ್ಪರ್ಧಿಗಳಾಗಿದ್ದ ಸೋಮಣ್ಣ ಮಾಚಿಮಾಡ, ಜಶ್ವಂತ್​, ಜಯಶ್ರೀ ಹಾಗೂ ಸೋನು ಗೌಡ ಬಿಗ್​ಬಾಸ್​ ಸೀಸನ್​ 9ಗೆ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಬಿಗ್​ಬಾಸ್​ ಒಟಿಟಿ ಸೀಸನ್​ ಒಂದಕ್ಕೆ ವಿನ್ನರ್​ ಎಂದು ಯಾರೂ ಇರುವುದಿಲ್ಲ. ವೂಟ್​ ಆಯಪ್​ನಲ್ಲಿ ವೀಕ್ಷಕರು ನೀಡಿದ ಮತಗಳನ್ನು ಆಧರಿಸಿ ಅತ್ಯಧಿಕ ಮತಗಳನ್ನು ಪಡೆದಿರುವ ರೂಪೇಶ್​ ಶೆಟ್ಟಿಯನ್ನು ಟಾಪರ್​ ಎಂದು ಘೋಷಣೆ ಮಾಡಲಾಗಿದೆ. ಜನಪ್ರಿಯ ಸ್ಪರ್ಧಿ ಎಂಬ ಶೀರ್ಷಿಕೆ ಪಡೆದ ರೂಪೇಶ್​ ಶೆಟ್ಟಿಗೆ ಬಹುಮಾನದ ರೂಪದಲ್ಲಿ ಐದು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.

ಬಿಗ್​ಬಾಸ್​​ ಒಟಿಟಿ ಸೀಸನ್​​ನ ಐದನೇ ವಾರದಲ್ಲಿ ಹಣ ಗಳಿಕೆ ಮಾಡಲು ಬಿಗ್​ಬಾಸ್​ ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸ್ಪರ್ಧಿಗಳು 2,86,000 ರೂಪಾಯಿಗಳನ್ನು ಗೆದ್ದಿದ್ದರು. ಈ ಹಣ ಹಾಗೂ 2,14,000 ರೂಪಾಯಿಗಳನ್ನು ಸೇರಿಸಿ ರೂಪೇಶ್​ ಶೆಟ್ಟಿ ಒಟ್ಟು ಐದು ಲಕ್ಷ ರೂಪಾಯಿಗಳ ಚೆಕ್​ನ್ನು ಸ್ವೀಕರಿಸಿದ್ದಾರೆ. ಬಿಗ್​ ಬಾಸ್​ ಒಟಿಟಿ ಸೀಸನ್​ನಲ್ಲಿ ಟಾಪರ್​ ಎನಿಸಿರುವ ರೂಪೇಶ್​ ಶೆಟ್ಟಿ ಬಿಗ್​ಬಾಸ್​ ಸೀಸನ್​ 9ನಲ್ಲಿ ಯಾವ ರೀತಿ ಕಮಾಲ್​ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *