Breaking News

ಟಾಟಾ ಹ್ಯಾರಿಯರ್, ಸಫಾರಿ ಕಾರುಗಳು, ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 32ಕ್ಕೆ 30.08 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.54 ಅಂಕಗಳನ್ನು ಪಡೆದಿವೆ…..

ದೇಶದ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆ ‘ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ’ (ಭಾರತ್ ಎನ್‌ಸಿಎಪಿ – Bharat NCAP), ಡಿ.15ರಿಂದ ಕಾರ್ಯಾರಂಭ ಮಾಡಿತ್ತು. ಟಾಟಾ ಹ್ಯಾರಿಯರ್ (Tata Harrier) ಮತ್ತು ಸಫಾರಿ (Safari)ಯನ್ನು ಭಾರತದಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಿದ ಮೊದಲ ಕಾರುಗಳೆಂದು ಭಾರತ್ ಎನ್‌ಸಿಎಪಿ ಘೋಷಣೆ ಮಾಡಿದೆ.
ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ (Adult Occupant Protection) ಹಾಗೂ ಮಕ್ಕಳ ರಕ್ಷಣೆ (Child Occupant Protection) ವಿಭಾಗದಲ್ಲಿ ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು 5 – ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ಭಾರತ್ ಎನ್‌ಸಿಎಪಿ ಸೈಡ್ ಇಂಪ್ಯಾಕ್ಟ್, ಫ್ರಂಟಲ್ ಇಂಪ್ಯಾಕ್ಟ್, ಪೋಲ್ ಸೈಡ್ ಇಂಪ್ಯಾಕ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದೆ.

ಟಾಟಾ ಹ್ಯಾರಿಯರ್, ಸಫಾರಿ ಕಾರುಗಳು, ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 32ಕ್ಕೆ 30.08 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.54 ಅಂಕಗಳನ್ನು ಪಡೆದಿವೆ. ಈ ಹಿಂದೆ, ಇವೆರೆಡು ಎಸ್‌ಯುವಿಗಳು ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸುವ ಕ್ರ್ಯಾಶ್ ಟೆಸ್ಟ್ ನಲ್ಲಿಯೂ 5 – ಸ್ಟಾರ್ ರೇಟಿಂಗ್ ಗಳಿಸುವ ಮೂಲಕ ಅತ್ಯುತ್ತಮ ಸುರಕ್ಷತಾ ಕಾರುಗಳಾಗಿ ಹೊರಹೊಮ್ಮಿದ್ದವು.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *